ಕಾಗವಾಡ

ಶಿರಗುಪ್ಪಿಯಲ್ಲಿ ಸಮುದಾಯ ಭವನ ಕಾಮಗಾರಿಗೆ ಚಾಲನೆ..

ಶಿರಗುಪ್ಪಿಯಲ್ಲಿ ಸಮುದಾಯ ಭವನ ಕಾಮಗಾರಿಗೆ ಚಾಲನೆ..

ಲೋಕದರ್ಶನ ವರದಿ 

ಶಾಸಕ ರಾಜು ಕಾಗೆಯವರಿಗೆ ಸಚಿವ ಸ್ಥಾನ ನೀಡಿ: ಸುಭಾಷ ಪಾಟೀಲ ಒತ್ತಾಯ..!!  

ಕಾಗವಾಡ 28: ಐದು ಬಾರಿ ಶಾಸಕರಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ರಾಜು ಕಾಗೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಸುಭಾಷ ಪಾಟೀಲ ಒತ್ತಾಯಿಸಿದ್ದಾರೆ. 

ಅವರು, ಗುರುವಾರ ದಿ. 28 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಾಸಕ ರಾಜು ಕಾಗೆ ಇವರ 20 ಲಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಇವರ ತಲಾ 5 ಲಕ್ಷ ಅನುದಾನ ಹೀಗೆ ಒಟ್ಟು ರೂ. 30 ಲಕ್ಷದ ಸಮುದಾಯ ಭವನ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಗಣ್ಯರೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. 

ಈ ವೇಳೆ ಸುಭಾಷ ಪಾಟೀಲ, ವಿಜಯ ಅಕಿವಾಟೆ, ದೀಪುಗೌಡಾ ಪಾಟೀಲ, ಭೀಮು ಅಕಿವಾಟೆ, ಕೆ.ಸಿ. ಪಾಟೀಲ, ರಾಜೇಂದ್ರ ಚೌಗುಲೆ, ಅನೀಲ ಚೌಗುಲೆ, ಪ್ರಕಾಶ ಹೆಮಗೀರೆ, ಬಿ.ಜಿ. ಪಾಟೀಲ, ಈರಗೌಡಾ ಪಾಟೀಲ, ಗಣೇಶ ಪಾಟೀಲ, ಆರ್‌.ಎಸ್‌. ಪಾಟೀಲ, ಡಾ. ಅಮೋಲ ಸರಡೆ, ಸುರೇಶ ಚೌಗುಲೆ, ಶ್ರೀಮಂತ ಸುಳಕೂಡೆ, ಶೇಖರ ಪಾಟೀಲ, ಐ.ಎ. ಪಾಟೀಲ, ವಿವೇಕ ಪಾಟೀಲ, ಎ.ಆರ್‌. ಪಾಟೀಲ, ತಮ್ಮಣ್ಣಿ ಬೆನ್ನಾಡಿ, ಪ್ರಸನ್ನ ಬಾಡಗೆ, ರವೀಂದ್ರ ಪಾಟೀಲ, ದಯಾನಂದ ಸವದೆ, ಶಂಕರ ಸವದೆ, ಶಂಕರ ಸುಳಕೂಡೆ, ತಮ್ಮಣ್ಣಾ ತಮದಡ್ಡಿ, ಸಂತೋಶ ಪಾಟೀಲ, ಮಲಗೌಡಾ ಪಾಟೀಲ, ವಿನೋದ ಮೆಟಗೂಳೆ, ದಾದಗೌಡಾ ಪಾಟೀಲ, ಶಿವಶಾಂತ ಚೌಗುಲೆ, ಮಲ್ಲಯ್ಯ ಹಿರೇಮಠ, ಗುತ್ತಿಗೆದಾರರಾದ ಸೋಮರಾಜ ಪಾಟೀಲ, ಪ್ರಕಾಶ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ