ಕ್ರೀಡೆಯಲ್ಲಿ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
Student athletes selected for state level in sports
ಕಂಪ್ಲಿ 04: ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಮದರ್ ತೇರೆಸಾ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯರು ಸಾದನೆ ಮಾಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾಗಿ ಕಂಪ್ಲಿಗೆ ಕೀರ್ತಿ ತಂದಿದ್ದಾರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಲೇಜು ಮಟ್ಟದ ಕ್ರೀಡೆಗಳು ನಡೆದವು. ಈ ಕ್ರೀಡೆಗಳಲ್ಲಿ ಒಂದಾದ ವೈಯಕ್ತಿಕ ಕ್ರೀಡೆಯ 800/1500 ಮೀಟರ್ ಓಟದ ಸ್ಪರ್ಧೆಯಲ್ಲಿ ಜ್ಯೋತಿ ಓರಾ್ವಯಿ ವಿದ್ಯಾರ್ಥಿನಿ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದು, ಜಾವಲೀನ್ ಎಸೆತದಲ್ಲಿ ಶಾಶಾಬೀ ಹಾಗೂ ಪ್ಯೋಲ್ ಬ್ಯಾಟ್(ಕೋಲುಜಿಗಿತ)ದಲ್ಲಿ ಮಲ್ಲೇಶ್ವರಿ ಪ್ರಥಮ ಸ್ಥಾನದೊಂದಿಗೆ ವಿಜಯಶಾಲಿಯಾಗಿ ಮೂಲಕ ರಾಜ್ಯ ಮಟ್ಟಕ್ಕೆ ಜಿಗಿದಿದ್ದಾರೆ. ಓಟದಲ್ಲಿ ಶಾಶಾಬೀ, ಸೋನಿ, ಜ್ಯೋತಿ, ಎನ್.ಶಾಂತಮ್ಮ, ಸಿ.ಕವಿತಾ ಇವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. 4?400 ಓಟದ ಸ್ಪರ್ಧೆಯಲ್ಲಿ ಜ್ಯೋತಿ, ಸೋನಿ, ಕೆ.ಅಂಜಲಿ, ಎ.ಸಿದ್ದಮ್ಮ, ಹಾಗೂ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಕೆ.ಅಂಜಲಿ ತೃತೀಯ ಸ್ಥಾನ, 400 ಮೀಟರ್ ಅಡೆತಡೆ ಓಡದಲ್ಲಿ ಕೆ.ಅಂಜಲಿ ತೃತೀಯ ಸ್ಥಾನ ಪಡೆದುಕೊಂಡರು. ಒಟ್ಟಾರೆಯಾಗಿ ಕಾಲೇಜು ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುವುದು ಮತ್ತೊಂದೆಡೆ ತೃತೀಯ ಸ್ಥಾನದೊಂದಿಗೆ ಸಾಧನೆಗೈದಿದ್ದಾರೆ. ಇದರ ಜೊತೆಗೆ ರಾಜ್ಯ ಮಟ್ಟದ ಖೋ ಖೋ ಕ್ರೀಡೆಗೆ ವಿದ್ಯಾರ್ಥಿನಿಯರಾದ ಜ್ಯೋತಿ, ಸಿದ್ದಮ್ಮ, ಸೋನಿ ಆಯ್ಕೆಗೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಒಟ್ಟಾರೆಯಾಗಿ ಕ್ರೀಡಾ ನಿರ್ದೇಶಕ ಲಕ್ಷ್ನಣನಾಯಕ, ಸಹಾಯಕ ನಿರ್ದೇಶಕಿ ಸುನೀತಾ ಇವರು ನೇತೃತ್ವದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈಯ್ಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿನಿಯರ ಸಾಧನೆಗೆ ವಿವಿಎಸ್‌ಎಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ, ಕಾರ್ಯದರ್ಶಿ ಜಿ.ಪ್ರಕಾಶ ನಾಯಕ, ಪ್ರಾಚಾರ್ಯರಾದ ಮದ್ದಾನೆಪ್ಪ ಬಿಡನಾಳ್, ಮಹಾಬಲೇಶ್ವರ್ಪ ಸೇರಿದಂತೆ ಕಾಲೇಜು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 