ರಾಜ್ಯ ಬಜೆಟ್ : ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪ್ರತಿಕ್ರಿಯೆ
State Budget: Karnataka Digital Economy Mission Response
ಬೆಳಗಾವಿ 07 : "ಈ ವರ್ಷದ ಬಜೆಟ್ ಕರ್ನಾಟಕ ಕೇವಲ ಎಐ ಆರ್ಥಿಕತೆಯ ಭಾಗವಾಗುತ್ತಿಲ್ಲ, ಬದಲಿಗೆ ಅದನ್ನು ಮುನ್ನಡೆಸುವ ಗುರಿ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಬೆಂಗಳೂರು ರೋಬೊಟಿಕ್ಸ್ ಮತ್ತು ಎಐ ಇನ್ನೋವೇಶನ್ ಝೇನ್, ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಗಳು ಮತ್ತು ’ಬಿಯಾಂಡ್ ಬೆಂಗಳೂರು’ ದೃಷ್ಟಿಕೋನ ಇತ್ಯಾದಿ ವಿನೂತನ, ಒಳಗೊಳ್ಳುವಿಕೆಯ ಮತ್ತು ಅಭಿವೃದ್ಧಿಯತ್ತ ಸಾಗುವ ಕರ್ನಾಟಕವನ್ನು ತೋರಿಸುತ್ತವೆ. ’ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ತಂತ್ರಜ್ಞಾನ ಹೂಡಿಕೆಗಳು ಮತ್ತು ಹೊಸ ವ್ಯವಹಾರಗಳನ್ನು ಆಕರ್ಷಿಸುತ್ತಿರುವ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮೈಸೂರು ಮತ್ತು ಮಂಗಳೂರು ಕಾರಿಡಾರ್ಗಳನ್ನು ಬಲಪಡಿಸುವಲ್ಲಿ ಕರ್ನಾಟಕ ಸರ್ಕಾರದ ನಿರಂತರ ಗಮನವನ್ನು ನಾವು ಶ್ಲಾಘಿಸುತ್ತೇವೆ.
ಮಹತ್ವದ ಸಂಗತಿಯೆಂದರೆ, ಪ್ರತಿಭೆಗಳ ಸಿದ್ಧತೆಗೆ ಸಂಬಂಧಿಸಿದ ಉದ್ಯಮದ ಸವಾಲುಗಳು ಈಗ ದೃಢವಾದ ಯೋಜನೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ’ಸೂಪರ್ 100 ಉದ್ಯಮ-ಶೈಕ್ಷಣಿಕ ದತ್ತು ಕಾರ್ಯಕ್ರಮ’ವು ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವಿನ ಪಾಲುದಾರಿಕೆಯನ್ನು ಗಾಢವಾಗಿಸುತ್ತದೆ. ಭಾರತದ ನುರಿತ ಕಾರ್ಯಪಡೆ ಇನ್ನೂ ಸುಮಾರು ಶೇ.4-5 ರಷ್ಟಿರುವುದರಿಂದ, ಕೌಶಲ್ಯದ ಮೇಲೆ ಹೂಡಿಕೆ ಮಾಡುವ ಪ್ರತಿ ರೂಪಾಯಿಯು ಉದ್ಯೋಗಾವಕಾಶ, ಹೊಸ ಆವಿಷ್ಕಾರ ಸಾಮರ್ಥ್ಯ ಮತ್ತು ಆರ್ಥಿಕ ಉತ್ಪಾದಕತೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಕರ್ನಾಟಕವು 550 ಕ್ಕೂ ಹೆಚ್ಚು ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ಗಳೊಂದಿಗೆ ದೇಶವನ್ನು ಮುನ್ನಡೆಸುತ್ತಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಉತ್ತೇಜಿಸಲು ಹೊಸ ಐಟಿ ಪಾರ್ಕ್ ಘೋಷಣೆ ಮತ್ತು ಫಿಶರೀಸ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ಕೇಂದ್ರಿತ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯು ಬೆಂಗಳೂರಿನ ಹೊರತಾಗಿ ವಿಶೇಷ ಆವಿಷ್ಕಾರ ಕ್ಲಸ್ಟರ್ ಗಳನ್ನು ನಿರ್ಮಿಸುವ ಸರ್ಕಾರದ ಬದ್ಧತೆ ತೋರಿಸುತ್ತದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ಪರಿವರ್ತಿಸಲು ಮತ್ತು ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸಲು ಕೆಡಿಇಎಂ, ಸರ್ಕಾರ ಮತ್ತು ಉದ್ಯಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ.
" ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಜೀವ್ ಕುಮಾರ್ ಗುಪ್ತಾ, ತಿಳಿಸಿದ್ದಾರೆ" ಬೆಂಗಳೂರನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೂ ಹೊಸ ಆವಿಷ್ಕಾರ ಸಾಧ್ಯತೆಯನ್ನು ವಿಸ್ತರಿಸುವ ರಾಜ್ಯ ಸರ್ಕಾರ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಗಳು ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿನ ಹೂಡಿಕೆಗಳು, ಮುಂದಿನ ಪೀಳಿಗೆಯ ಆವಿಷ್ಕಾರ ಮೂಲಸೌಕರ್ಯವನ್ನು ನಿರ್ಮಿಸುವ ಸರ್ಕಾರದ ಗುರಿಯನ್ನು ಪ್ರತಿಬಿಂಬಿಸುತ್ತವೆ.ಅದೇ ರೀತಿ? 1,000 ಕೋಟಿ ವೆಚ್ಚದ ಲೀಪ್ ಯೋಜನೆ ಅಡಿಯಲ್ಲಿ ’ಸೂಪರ್ 100 ಉದ್ಯಮ-ಶೈಕ್ಷಣಿಕ ದತ್ತು ಕಾರ್ಯಕ್ರಮ’ವನ್ನು ಮುನ್ನಡೆಸಲು ಕೆಡಿಇಎಂ ಹೆಮ್ಮೆಪಡುತ್ತದೆ.
ಟಿಯರ್-2 ಮತ್ತು ಟಿಯರ್-3 ನಗರಗಳಲ್ಲಿ ’ಪ್ಲಗ್ ಅಂಡ್ ಪ್ಲೇ’ ಇನ್ ಕ್ಯುಬೇಶನ್ ಸೌಲಭ್ಯಗಳು, ಐಟಿ ಪಾರ್ಕ್ ಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ನೀಡುತ್ತಿರುವ ನಿರಂತರ ಪ್ರೋತ್ಸಾಹವು 18,000ಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್ ಅಪ್ ಗಳೊಂದಿಗೆ ಜಾಗತಿಕ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕವು 14ನೇ ಸ್ಥಾನಕ್ಕೆ ಏರಿರುವುದು ಮತ್ತು ವಿಶ್ವದ ಟಾಪ್ 50 ಎಐ ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿರುವುದು ಕೇವಲ ಶ್ರೇಯಾಂಕಗಳಲ್ಲ, ಇವು ಸರ್ಕಾರದ ಹಲವು ವರ್ಷಗಳ ನಿರಂತರ ನೀತಿ ಬೆಂಬಲ ಮತ್ತು ಉದ್ಯಮದೊಂದಿಗಿನ ಸಹಭಾಗಿತ್ವದ ಪ್ರತಿಫಲವಾಗಿದೆ" ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷರಾದ ಬಿ.ವಿ. ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 