ಕುಷ್ಟಗಿ

7ರಂದು ರಾಜ್ಯ ಭೋವಿ ವಡ್ಡರ ಮಹಾಸಭಾದ ಸಂಘಟನೆಯ ಸಭೆ

7ರಂದು ರಾಜ್ಯ ಭೋವಿ ವಡ್ಡರ ಮಹಾಸಭಾದ ಸಂಘಟನೆಯ ಸಭೆ

ಕುಷ್ಟಗಿ 04: ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ರಾಮೇಶ್ವರ ಪೂಜ್ಯರು ನೇತೃತ್ವದಲ್ಲಿ ಆಗಸ್ಟ್‌ 07 ಭಾನುವಾರ ಬೆಳಗ್ಗೆ 10ಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶ್ರೀ ಕ್ಷೇತ್ರ ಕೂಡಲಸಂಗಮದಲ್ಲಿ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾದ ಸಂಘಟನೆಯನ್ನು ಚುರುಕುಗೊಳಿಸಲು ಸಂಘಟನಾತ್ಮಕ ಚಿಂತನ ಮಂತನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಇಂಗಳಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಸಂಘಟನೆ ನೇತೃತ್ವದಲ್ಲಿ ಆಗಸ್ಟ್‌ 07 ಭಾನುವಾರ ಬೆಳಗ್ಗೆ 10ಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶ್ರೀ ಕ್ಷೇತ್ರ ಕೂಡಲಸಂಗಮದಲ್ಲಿ ರಾಜ್ಯದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆ ಸೇರಿದಂತೆ ಇನ್ನು ಅನೇಕ ಜಿಲ್ಲೆಗಳ  ಸಂಘಟನೆಗಳ ಆಕಾಂಕ್ಷಿಗಳು ಮತ್ತು ಪದಾಧಿಕಾರಿಗಳು ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸುವರು.  

ಸಭೆಯಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ರಾಮೇಶ್ವರ ಪೂಜ್ಯರು ಸಾನಿಧ್ಯ ವಹಿಸುವವರು ಭೋವಿ ವಡ್ಡರ ಮಹಾಸಭಾ ರಾಜ್ಯಾಧ್ಯಕ್ಷ ಮಂಜಣ್ಣ ಭೋವಿ, ಪ್ರಧಾನ ಕಾರ್ಯದರ್ಶಿ ಹುಲ್ಲಪ್ಪ ಹಳ್ಳೂರ ಹಾಗೂ ಅನೇಕ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಗ್ರಾಮೀಣ ಭಾಗದ ಭೋವಿ ಮಹಾಸಭಾದ ಸಂಘಟನೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಿಂತನ ಮಂಥನ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಭೋವಿ ಮಹಾಸಭಾ ಸಂಘಟನೆ ಸಂಚಾಲಕ ನಾಗರಾಜ ಭೋವಿ ಮನವಿ ಮಾಡಿದ್ದಾರೆ. 


ಸುದ್ದಿ ಓದಿ