ಸ್ಟಾರ್ ಏರ್ನಿಂದ ಬೆಳಗಾವಿ-ಕೊಲ್ಲಾಪುರ ಸಂಪರ್ಕದ ವಿಸ್ತರಣೆ
Star Air to expand Belgaum-Kollapur connection
ಲೋಕದರ್ಶನ ವರದಿ
ಬೆಳಗಾವಿ, ಮಾರ್ಚ್ 13 : ಪ್ರಾದೇಶಿಕ ವಾಯು ಸಂಪರ್ಕ ಸದೃಢಗೊಳಿಸುವ ನಿಟ್ಟಿನಲ್ಲಿ ಸಂಜಯ್ ಘೊಡಾವತ್ ಸಮೂಹದ ಸ್ಟಾರ್ ಏರ್ ತನ್ನ ಜಾಲದಲ್ಲಿ ಪ್ರಮುಖ ವಿಸ್ತರಣೆಯನ್ನು ಪ್ರಕಟಿಸಿದ್ದು ಈ ವಿಸ್ತಾರ ಯೋಜನೆಯ ಭಾಗವಾಗಿ ಬೆಳಗಾವಿ ಮತ್ತು ಕೊಲ್ಲಾಪುರದ ನಡುವೆ ಸಂಪರ್ಕ ಹೆಚ್ಚಿಸಲಿದ್ದು ಅವುಗಳನ್ನು ವೃದ್ಧಿಸುತ್ತಿರುವ ಜಾಲಕ್ಕೆ ಸೇರಿಸಲಿದೆ. ಬೆಳಗಾವಿಯ ಕೈಗಾರಿಕಾ ಸಾಮರ್ಥ್ಯ ಮತ್ತು ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿರುವುದು ಅದಕ್ಕೆ ಸೂಕ್ತವಾದ ತಾಣವಾಗಿಸಿದೆ. ಕೊಲ್ಲಾಪುರವು ವ್ಯಾಪಾರ ವಹಿವಾಟು, ಶ್ರೀಮಂತ ಉತ್ಪಾದನೆಯ ಪರಂಪರೆ ಮತ್ತು ತಡೆರಹಿತ ಸಂಪರ್ಕಕ್ಕೆ ಹೆಚ್ಚಿನ ಬೇಡಿಕೆ ಹೊಂದಿದೆ.
ಒಟ್ಟಿಗೆ ಈ ಎರಡೂ ನಗರಗಳು ಸ್ಟಾರ್ ಏರ್ ನ ಪ್ರಾದೇಶಿಕ ಪ್ರಗತಿಯ ಕೇಂದ್ರದಲ್ಲಿವೆ ಮತ್ತು ತಲುಪದ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಿಸಲಿವೆ. ಸ್ಟಾರ್ ಏರ್ ತನ್ನ ಸಮಯಪಾಲನೆಗೆ ಖ್ಯಾತಿ ಪಡೆದಿದ್ದು ಬೆಳಗಾವಿಯಿಂದ ಕೊಲ್ಲಾಪುರದ ಶೇ.85ರಷ್ಟು ವಿಮಾನಗಳು ಸಕಾಲಕ್ಕೆ ಪ್ರಯಾಣಿಸುತ್ತವೆ. ಈ ಬೇಸಿಗೆಗೆ ವಾರಕ್ಕೆ 450ರಿಂದ 550 ವಿಮಾನಗಳಿಗೆ ಹೆಚ್ಚಿಸಲಿದ್ದು ಇದು ತನ್ನ ಜಾಲದಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಪ್ರತಿಕ್ರಿಯೆಯಾಗಿದೆ.
ಪ್ರಾರಂಭದಿಂದ ಸುಮಾರು 3 ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ದಿದ್ದು ಸ್ಟಾರ್ ಏರ್ “ಕನೆಕ್ಟಿಂಗ್ ರಿಯಲ್ ಇಂಡಿಯಾ”ಎಂಬ ತನ್ನ ಧ್ಯೇಯೋದ್ದೇಶಕ್ಕೆ ಬದ್ಧವಾಗಿದೆ. ಈ ಸಂಸ್ಥೆಯು ಬೆಳಗಾವಿ ಮತ್ತು ಮುಂಬೈಗಳ ನಡುವೆ ಪ್ರತಿನಿತ್ಯ ನೇರ ವಿಮಾನಗಳ ಹಾರಾಟ ನಡೆಸುತ್ತಿದ್ದು ಉತ್ತರ ಕರ್ನಾಟಕ ಮತ್ತು ಮಧ್ಯ ಭಾರತವನ್ನು ಸಂಪರ್ಕಿಸುತ್ತಿದೆ. ಅದೇ ರೀತಿಯಲ್ಲಿ ಕೊಲ್ಲಾಪುರದಿಂದ ಹೊಸ ಮತ್ತು ಸುಧಾರಿತ ವಿಮಾನಗಳನ್ನು ಮುಂಬೈ, ಅಹಮದಾಬಾದ್ ಮತ್ತು ಬೆಂಗಳೂರುಗಳಿಗೆ ಹಾರಾಟ ನಡೆಸುತ್ತಿದೆ.
ಇದಲ್ಲದೆ ಕಿಶನ್ ಗಢ್ ಮತ್ತು ಇಂದೋರ್ ಗಳ ಸಂಪರ್ಕ ನೀಡುತ್ತಿದೆ. ಕೊಲ್ಲಾಪುರ-ಮುಂಬೈ ಹಾಗೂ ಕೊಲ್ಲಾಪುರ-ಬೆಂಗಳೂರು ಮಾರ್ಗಗಳಿಗೆ 4,499 ಮತ್ತು ಬೆಳಗಾವಿ-ಮುಂಬೈ ಮಾರ್ಗಕ್ಕೆ 5,049 ಬೆಲೆ ನಿಗದಿಪಡಿಸಿರುವ ಸ್ಟಾರ್ ಏರ್ ವಾಣಿಜ್ಯ ಮತ್ತು ವಿರಾಮದ ಪ್ರಯಾಣಿಕರಿಗೆ ಹಿಂದೆಂದಿಗಿಂತ ಹೆಚ್ಚು ಕೈಗೆಟುಕುವಂತೆ ಮಾಡಿದೆ. ಈ ವಿಮಾನಯಾನ ಸಂಸ್ಥೆಯು ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ ಮತ್ತು ವಿಮಾನ ಯಾನವನ್ನು ಹೊಸ ನಗರಗಳು ಮತ್ತು ಪ್ರದೇಶಗಳಿಗೂ ಕೈಗೆಟುಕುವಂತೆ ಮಾಡುತ್ತಿದೆ. ಈ ವಿಸ್ತರಣೆ ಕುರಿತು ಸ್ಟಾರ್ ಏರ್ ಚೀಫ್ ಕಮರ್ಷಿಯಲ್ ಅಂಡ್ ಮಾರ್ಕೆಟಿಂಗ್ ಆಫೀಸರ್ ಶಿಲ್ಪಾ ಭಾಟಿಯಾ, “ಕೊಲ್ಲಾಪುರ ಮತ್ತು ಬೆಳಗಾವಿಗೆ ಆದ್ಯತೆ ನೀಡುವುದು ಭಾರತದ ವೈಮಾನಿಕ ವಲಯದಲ್ಲಿ ನಮ್ಮ ವ್ಯಾಪ್ತಿ ಹೆಚ್ಚಿಸುವಲ್ಲಿ ನಮ್ಮ ಧ್ಯೇಯೋದ್ದೇಶದ ಕೇಂದ್ರವಾಗಿದೆ.
ಪ್ರತಿ ಹೊಸ ಮಾರ್ಗ ಮತ್ತು ಹೆಚ್ಚುವರಿ ವಿಮಾನದಿಂದ ನಾವು ಉದ್ಯಮಗಳು, ಕುಟುಂಬಗಳು ಮತ್ತು ಕನಸುಗಳ ನಡುವೆ ಅಂತರ ತುಂಬುತ್ತಿದ್ದೇವೆ. ನಮ್ಮ ವಿಸ್ತರಿಸುತ್ತಿರುವ ಜಾಲದಿಂದ ಸಮುದಾಯಗಳ ಸಬಲೀಕರಣ, ಆರ್ಥಿಕ ಸಾಮರ್ಥ್ಯದ ಅನಾವರಣ ಮತ್ತು ಪ್ರಾದೇಶಿಕ ಭಾರತವು ವೃದ್ಧಿಸಲು ಸಜ್ಜಾಗಿದೆ ಎಂದು ತೋರುವುದಾಗಿದೆ. ನಾವು ವಿಶ್ವಾಸಾರ್ಹ, ಅನುಕೂಲಕರ ಮತ್ತು ವಿಮಾನ ಯಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಬದ್ಧರಾಗಿದ್ದೇವೆ” ಎಂದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 