ಅದ್ದೂರಿಯಾಗಿ ಜರುಗಿದ ಶ್ರೀ ಸಿದ್ದಲಿಂಗೇಶ್ವರ ಮಹಾರಥೋತ್ಸವ
Sri Siddalingeshwara Maharathotsava celebrated with grandeur
ಪಾಲಬಾವಿ, 27 : ಸತ್ಯ ನುಡಿದು, ದಾನ ಮಾಡಿ ಧರ್ಮದಿಂದ ನಡೆದುಕೊಂಡು, ನ್ಯಾಯ- ನೀತಿ, ಹಾಗೂ ಸತ್ಸಂಗದಿಂದ ಜೀವನ ಮುಕ್ತಿ ಹೊಂದುವುದು, ಸಜ್ಜನರ ಸಂಗ ಮಾಡಿ ಒಳ್ಳೆಯ ಕಾರ್ಯ ಹಾಗೂ ಧರ್ಮದ ಸೇವೆ ಮಾಡುತ್ತ ಗುರುವಿನ ಭಕ್ತಿ ಮಾಡಿದರೆ ಗುರು ಸನ್ಮಾರ್ಗದೆಡೆಗೆ ಕರೆದೊಯ್ಯುವನು, ಭಾರತದಾದ್ಯಂತ ಒಳ್ಳೆಯ ಮಳೆ-ಬೆಳೆಯಿಂದ ಸಮೃದ್ದಿ ತಂಬಲಿ, ಭಕ್ತರ ಕಷ್ಟವು ದೂರವಾವುದು ಸದ್ಗುರುಗಳ ಆಶೀರ್ವಾದ ಸದಾಕಾಲವೂ ಇರಲಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನಡೆದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿ.26 ಗುರುವಾರ ದಂದು ಸಾಯಂಕಾಲ 6ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅಶೀರ್ವಚನ ನೀಡಿದರು.ಗುರುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ, ಶ್ರೀ ಯಲ್ಲಾಲಿಂಗೇಶ್ವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಂಗಳಾರುತಿ ನೆರವೇರಿಸಿದರು.
ಅಜ್ಜನ ಅಗ್ಗಿ ಜಾತ್ರೆ:ಶ್ರೀಮಠದ ಪರಂಪರೆಯಂತೆ ಮಾ.25 ಬುಧವಾರ ರಾತ್ರಿಯಿಂದ ಭಕ್ತರು ಮಡಿಯಿಂದ ಕಟ್ಟಿಗೆ ತಂದು ಬೆಂಕಿ ಮಾಡಿ ಅಗ್ನಿ ಕೊಂಡ ತಯಾರಿಸಿದರು. ಗುರುವಾರ ಮುಂಜಾನೆ 11ಕ್ಕೆ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ, ಭಕ್ತರು ವರ್ಷವಿಡಿ ಪಾಪದ ಸಂಕೋಲೆಗಳನ್ನು ಸುಡಲೆಂದು ಅಗ್ನಿ ಹಾಯ್ದರು. ಎಲ್ಲ ಭಕ್ತಾದಿಗಳು ಅಗ್ನಿ ಕುಂಡದಲ್ಲಿ ನಾಣ್ಯಗಳನ್ನು ಹಾಕಿ ಸಿದ್ದಲಿಂಗ, ಯಲ್ಲಾಲಿಂಗ, ಸಿದ್ದರಾಮ ಎಂದು ಜಯಕಾರ ಹಾಕಿದರು.ಶ್ರೀ ಸಿದ್ಧಲಿಂಗೇಶ್ವರ ಶ್ರೀಗಳ ರಥೋತ್ಸವ: ಸಾಯಂಕಾಲ 6 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಪುಷ್ಪಗಳಿಂದ ಅಲಂಕರಿಸಿದ ಮಹಾರಥೋತ್ಸವ ಹಾಗೂ ಪುಪ್ಷವೃಷ್ಟಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತ ಸಮೂಹ ರಥೋತ್ಸವಕ್ಕೆ ಖಾರಿಕ, ಬಿಸ್ಕೇಟ, ಬೆತ್ತಸ, ಬಾಳೆಹಣ್ಣು ಹಾರಿಸಿ ಗುರುಗಳಿಗೆ ಜೈಕಾರ ಹಾಕುತ್ತ ರಥೋತ್ಸವಕ್ಕೆ ನಮನ ಸಲ್ಲಿಸಿದರು. ಭಕ್ತರಿಂದ ಬುಧವಾರ ಸಾಯಂಕಾಲದಿಂದ ಗುರುವಾರ ಬೆಳಗಿನವರೆಗೂ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ನಾನಮಾಡಿ ಮಡಿಯಿಂದ ಸುಮಾರು 8 ರಿಂದ 10 ಕಿ.ಮೀ ದೂರದಿಂದ ದಂಡೊತ್ತ (ದೀರ್ಘ ದಂಡ ನಮಸ್ಕಾರ) ಹಾಕಿ ತಮ್ಮ ಭಕ್ತಿ ಸಮರ್ಿಸಿದರು.
ರೈತ ಮುಖಂಡ ಚುನಪ್ಪ ಪೂಜಾರಿ ಇವರಿಗೆ ಶ್ರೀ ಮಠದಿಂದ ಕಾರು ಖರೀದಿಗೆ ರೂ.2 ಲಕ್ಷಗಳನ್ನು ನೀಡಿ ಸತ್ಕರಿಸಿ ಗೌರವಿಸಿದರು. ಆಸ್ಥಾನದ ಗವಾಯಿಗಳಿಂದ ಸಂಗೀತ ಸೇವೆ ನಡೆಯಿತು. ಈ ಭವ್ಯ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕವು ಸೇರಿದಂತೆ ಆಂಧ್ರ, ತೆಲಂಗಾಣ, ಗೋವಾ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 