ಮೂಡಲಗಿ

ಶ್ರೀರಾಮ ನ್ಯಾಯ ನೀತಿ ಧರ್ಮದ ಪ್ರತೀಕ

ಶ್ರೀರಾಮ ನ್ಯಾಯ ನೀತಿ ಧರ್ಮದ ಪ್ರತೀಕ

ಲೋಕದರ್ಶನ ವರದಿ

ಮೂಡಲಗಿ 30: ಶ್ರೀರಾಮ ನ್ಯಾಯ ನೀತಿ ಧರ್ಮದ ಪ್ರತೀಕ. ಅಯೋಧೆ್ಯಯಲ್ಲಿ ಆದರ್ಶ ಆಡಳಿತ ನಡೆಸಿ ವಿಶ್ವಕ್ಕೆ ಮಾದರಿಯಾದ ಮಹಾನ ವ್ಯಕ್ತಿ ಶ್ರೀರಾಮರು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.  

ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀರಾಮ ವೃತ್ತದಲ್ಲಿ ಇಂದು ಮುಂಜಾನೆ ರಾಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಪ್ರತಿಯೊಬ್ಬ ಯುವಕರು ರಾಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ರಾಮರಾಜ್ಯವಾಗುವದು ಎಂದರು.  

ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ. ಭೀಮಶಿ ಪೂಜೇರಿ. ಪ್ರಕಾಶ ಬೀಸನಕೊಪ್ಪ. ರಮೇಶ ಬಡಕಲ್ಲ. ಸತೀಶ ವಂಟಗೋಡಿ. ರಾಜು ಕೊಪ್ಪದ. ಬಸು ಮಲಕನ್ನವರ. ರಮೇಶ ಜಗದಾಳ. ಸುಶೀತ ನಾಯಿಕ. ವಿಜಯ ಜಡ್ಲಿ. ರಾಜು ತಟ್ಟಿ. ವಿಠ್ಠಲ ಪೂಜೇರಿ. ಮಹಾಂತೇಶ ಗಣಿ. ಪಾಂಡು ದಾಸರ. ಬಸು ಬಿಲಕುಂದಿ. ಆನಂದ ಪಾತ್ರೋಟ. ಕ್ಷತ್ರೀಯ ಸಮಾಜ ಬಾಂಧವರು ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ