ಶ್ರೀ ಸಾಯಿ ಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ
Sri Ram Navami celebrations at Sri Sai Temple
ಲೋಕದರ್ಶನ ವರದಿ
ಶಿಗ್ಗಾವಿ 27 : ಶ್ರೀಸಾಯಿ ಮಂದಿರದಲ್ಲಿ ಶ್ರೀರಾಮನವಮಿ ನಿಮಿತ್ಯ ಶ್ರೀರಾಮ, ಸಾಯಿಬಾಬಾ ಮೂರ್ತಿಗಳಿಗೆ ವಿಶೇಷವಾದ ಫಲ ಪುಷ್ಪಗಳ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ ಶ್ರೀಸಾಯಿ ಬಾಬಾ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ವಿಶೇಷ ಪೂಜೆಗಳೊಂದಿಗೆ ತೊಟ್ಟಿಲೋತ್ಸವ ಸಾಯಿ ನಗರದಲ್ಲಿ ನೇರವೇರಿಸಲಾಯಿತು. ನಂತರ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಶಿಧರ್ ಸುರಗಿಮಠ, ಬಸವರಾಜ ಹೆಸರೂರ, ವಿಶ್ವನಾಥ್ ವಾಲಿ ಶೆಟ್ಟರ್, ವಿ ಎಸ್ ಪಾಟೀಲ್. ಮಂಜುನಾಥ್ ಬಾಣದ, ನಾಗಯ್ಯ ಹಿರೇಮಠ, ಉಮೇಶ್ ಗೌಳಿ, ಕಲ್ಲಪ್ಪ ಹೆಸರೂರ, ತೋಟಯ್ಯ ಕುಂಬಾರಗೆರಿಮಠ, ಗುರುನಾಥ ಅಣ್ಣಿಗೇರಿ,ನವೀನ್ ಸಾಸನೂರ್, ವಿಶ್ವನಾಥ ಗಾಣಿಗೇರ್, ಪ್ರಸಾದ್ ಹಿರೇಮಠ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 