ಕೋವಿಡ್-19: ವಿದೇಶಿ ಪ್ರಯಾಣಿಕರಿಗೆ ನಿರ್ಬಂಧ ಹೇರಿದ ಶ್ರೀಲಂಕಾ
ಕೊಲೊಂಬೋ, ಮೇ 20: ಶ್ರೀಲಂಕಾದಲ್ಲಿ ಕೋವಿಡ್ -19 ಸಾಂಕ್ರಾಮಿಕ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ 10 ದಿನಗಳ ಅವಧಿಗೆ ದ್ವೀಪ ರಾಷ್ಟ್ರಕ್ಕೆ ವಿದೇಶಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
"ಮೇ 21ರ ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ಶ್ರೀಲಂಕಾದ ಎಲ್ಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಪ್ರವೇಶವನ್ನು ನಿರ್ವಬಂಧಿಸಲಾಗಿದೆ. ಇದು ಮೇ 31ರವರೆಗೆ ಜಾರಿಯಲ್ಲಿರಲಿದೆ”ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಅಂತರರಾಷ್ಟ್ರೀಯ ವಿಮಾನಗಳ ನಿರ್ಗಮನದ ಜೊತೆಗೆ ಸರಕು ಮತ್ತು ಮಾನವೀಯ ವಿಮಾನಗಳ ಆಗಮನಕ್ಕೆ ಅನುಮತಿ ನೀಡಲಾಗುವುದು.
ಶ್ರೀಲಂಕಾ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಎದುರಿಸುತ್ತಿದೆ. ಶ್ರೀಲಂಕಾ ಬುಧವಾರ 3,623 ಸೋಂಕುಗಳ ಸಾರ್ವಕಾಲಿಕ ದಾಖಲೆಯನ್ನು ಕಂಡಿದೆ.
ದಕ್ಷಿಣ ಏಷ್ಯಾ ರಾಷ್ಟ್ರವು ಈವರೆಗೆ 1,51,000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 1,051 ಕರೋನಾ ವೈರಸ್ ಸಂಬಂಧಿತ ಸಾವುಗಳನ್ನು ದಾಖಲಿಸಿದೆ.