ಉನ್ನತ ಸಾಧನೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ: ಪ್ರೊ. ಮುದ್ದಾರ
ಮೂಡಲಗಿ 11: ಮನುಷ್ಯನ ಅಂತಃ ಶಕ್ತಿಯನ್ನು ಹೆಚ್ಚಿಸಿ ಅವನ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಾಯಕಾರಿಯಾಗಿವೆ ಎಂದು ಗೋಕಾಕ ಜಿ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಸುರೇಶ ಮುದ್ದಾರ ಅಭಿಪ್ರಾಯಟ್ಟರು.
ಅವರು ಬುಧವಾರದಂದು ಜರುಗಿದ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2023-24 ನೇ ಸಾಲಿನ ಸಾಲಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿ, ಇಂದಿನ ಓಪಚಾರಿಕ ಶಿಕ್ಷಣ ಕೇವಲ ಅಂಕಗಳಿಸಲು ಹಾಗೂ ಉದ್ಯೋಗ ದಿಟ್ಟಿಸಲು ಸಿಮೀತವಾಗಿದ್ದು ಖೇದಕರ ವಿಷಯವಾಗಿದ್ದು, ವಿದ್ಯಾರ್ಥಿಗಳು ತಮ್ಮನ್ನು ತಾವು ಧನಾತ್ಮಕವಾಗಿ ರೂಪಿಸಿಕೊಂಡು ಆತ್ಮ ವಿಶ್ವಾಸದಿಂದ ಭವಿಷ್ಯದ ಬಗ್ಗೆ ಮುಂದಾಲೋಚನೆ ಮಾಡಿಕೊಂಡು ಶ್ರದ್ಧೆಯಿಂದ ತಮ್ಮ ಗುರಿಯೆಡೆಗೆ ತೊಡಗಿಸಿಕೊಂಡರೆ ಮಹಾನ್ ಸಾಧಕರಾಗಿ ರೂಪಗೊಳುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು, ಶಿಕ್ಷಕರು ಅವರಿಗೆ ಮಾರ್ಗದರ್ಶನ ಮಾಡಬೇಕು, ನಾವು ನಿಮ್ಮ ಬೆನ್ನೆಲುಬಾಗಿ ನಿಲ್ಲತ್ತೇವೆಂದು ಆಶ್ವಾಸನೆ ನೀಡಿದ ಅವರು ಪರೀಕ್ಷೆಗಳ ತಯಾರಿ ಬಗ್ಗೆ ಉತ್ತಮ ಮಾರ್ಗದರ್ಶಕರಿಂದ ಬೋಧನಾ ಕಾರ್ಯಕ್ರಮ ಏರಿ್ಡಸಲಾಗುವುದು ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾದ ವೆಂಕಟೇಶ ಸೋನವಾಲಕರ ಮತ್ತು ಉಪಾಧ್ಯಕ್ಷ ರವೀಂದ್ರ ಸೋನವಾಲಕರ ಹಾಗೂ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಚೆಸ್ ಬ್ಲೂ ಆದ ನವೀನ ಪೂಜೇರಿ, ದಾನಯ್ಯ ಹಿರೇಮಠ ಅವರನ್ನು ಸತ್ಕರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ ಸೋನವಾಲಕರ, ಅನೀಲ ಸತರಡ್ಡಿ, ಮಹಾವಿದ್ಯಾಲಯ ಪ್ರಾಚಾರ್ಯ ಸಂಗಮೇಶ ಗುಜಗೊಂಡ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಸ್.ಎಲ್.ಚಿತ್ರಗಾರ, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಪ್ರೊ.ಜಿ.ವಿ.ನಾಗರಾಜ, ಚುನಾವಣಾ ಸಾಕ್ಷರತಾ ಅಧಿಕಾರಿ ಪ್ರೊ.ಎಸ್.ಸಿ.ಮಂಟೂರ, ಯೂಥ ರೇಡ್ ಕ್ರಾಸ್ ಘಟಕಾಧಿಕಾರಿ ಪ್ರೊ.ಸಂಜಯ ಖೋತ ಇದ್ದರು. ಸಮಾರಂಭದಲ್ಲಿ ಗ್ರಂಥಪಾಲಕ ಬಸವಂತ ಬರಗಾಲಿ, ಪ್ರೊ.ವಿ.ಆರ್.ದೇವರಡ್ಡಿ, ಎಮ್.ಪಿ.ಇಡಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಮ್.ಕೆ.ಕಂಕಣವಾಡಿ, ಪ್ರೊ.ವಿಷ್ಣು ಬಾಗಡಿ, ಪ್ರೊ.ಎಲ್.ಪಿ.ಹಿಡಕಲ್, ಪ್ರೊ.ಶಿವಾನಂದ ಸವಸುದ್ದಿ, ಸಾವಿತ್ರಿ ಕೊತ್ತಲ, ಪ್ರೀತಿ ಬೆಳಗಳಿ, ಭಾರತಿ ತಳವಾರ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಎ.ಎಸ್.ಮಿಸಿನಾಯಿಕ ನಿರೂಪಿಸಿದರು. ಪ್ರೊ.ಎಸ್.ಸಿ.ಮಂಟೂರ ವಂದಿಸಿದರು.