ಜಗತ್ತಿನಾದ್ಯಂತ ಎಷ್ಟು ಕೋಟಿ ಜನ ಧಮ್ ಎಳೆಯುತ್ತಾರೆ ಗೊತ್ತಾ..!!
ನವದೆಹಲಿ, ಮೇ 31: ಜಗತ್ತಿನಾದ್ಯಂತ 110 ಕೋಟಿ ಜನರು ಧೂಮಪಾನ ಮಾಡುತ್ತಿದ್ದು, 2019 ರಲ್ಲಿ ವಿಶ್ವದಲ್ಲಿ 80 ಲಕ್ಷ ಜನರು ಧೂಮಪಾನದಿಂದಲೇ ಸಾವನ್ನಪ್ಪಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 1990 ರ ನಂತರ ಜಗತ್ತಿನಾದ್ಯಂತ ಧೂಮಪಾನ ಮಾಡುವವರ ಸಂಖ್ಯೆ 15 ಕೋಟಿಯಷ್ಟು ಹೆಚ್ಚಾಗಿದೆ ಎಂಬ ಹೊಸ ಮಾಹಿತಿ ಲಭ್ಯವಾಗಿದೆ. ಪ್ರತಿ ಐವರು ಪುರುಷರಲ್ಲಿ ಒಬ್ಬರು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಿದ್ದಾರೆ ಎಂಬ ಹೊಸ ಅಂಶ ಬೆಳಕಿಗೆ ಬಂದಿದೆ.
ಅಧ್ಯಯನದ ಪ್ರಕಾರ ಜಗತ್ತಿನಾದ್ಯಂತ ಯುವಕರೆ ಹೆಚ್ಚಾಗಿ ವ್ಯಸನಿಯಾಗಿರುವುದು ವರದಿಯಾಗಿದೆ 2019 ರಲ್ಲಿ ವಿಶ್ವದಲ್ಲಿ 80 ಲಕ್ಷ ಲಕ್ಷ ಜನರು ಧೂಮಪಾನದಿಂದ ಸಾವನ್ನಪ್ಪಿದ್ದರು. ಧೂಮಪಾನದಿಂದ ಹೃದ್ರೋಗವಾಗಿ ಸಾವನ್ನಪ್ಪುವವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಾಗಿದೆ
ಶ್ವಾಸನಾಳದ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ 10 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 10 ಲಕ್ಷ ಜನರು ಹೃದಯಾಘಾತದಿಂದಲೂ ಸಾಯುತ್ತಿದ್ದಾರೆ ಎಂದೂ ವರದಿಯಾಗಿದೆ