ಮೂಡಲಗಿ

ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಸತ್ಯಾಗ್ರಹ

ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಸತ್ಯಾಗ್ರಹ

ಲೋಕದರ್ಶನ ವರದಿ

ಮೂಡಲಗಿ 14: ಪಟ್ಟಣದ ಕಲ್ಮೇಶ್ವರ ವೃತದಲ್ಲಿ ಅರಭಾವಿ ಮತಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರು ಬುಧವಾರದಂದು  ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಕೇಂದ್ರ ಸರಕಾರ ರಚಿಸುತ್ತಿರುವ ಸಂಚನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ನೇತೃತ್ವದಲ್ಲಿ ಗಾಂಧಿಜೀ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನ ಸತ್ಯಾಗ್ರಹ ನಡೆಸಿದರು.  

   ಕಾಂಗ್ರೆಸ್ ಮುಖಂಡ ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವ್ಯವಸ್ಥಿತವಾಗಿ ರಾಹುಲ ಗಾಂಧೀ ಅವರ ಬೆಳವಣಿಗೆ ಮತ್ತು ನಾಯಕತ್ವ ಹತಿಕಲ್ಲಿಕ್ಕೆ ನ್ಯಾಯಾಂಗವನ್ನು ಬಳಸಿಕೊಂಡು  ಸಂಚುಮಾಡಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ನ್ಯಾಯಾಂಗ ಮೇಲೆ ಒತ್ತಡ ತಂದು ರಾಹುಲ ಗಾಂಧಿಜಿ ವಿರುದ್ಧವಾಗಿ ತೀಪರ್ು ಬರುವಂತೆ ನೋಡಿಕೊಂಡಿದ್ದಾರೆ ಎಂದ ಅವರು 2024ರ ಲೋಕಸಭೆ ಚುನಾವಣೆಯ ಜನತಾ ನ್ಯಾಯಾಲಯದಲ್ಲಿ ಮತದಾರ ಪ್ರಭುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು. 

 ಕಾಂಗ್ರೇಸ್ ಪಕ್ಷದ ಮುಖಂಡರಾದ ಎಸ್.ಆರ್.ಸೋನವಾಲಕರ, ಕೆ.ಟಿ.ಗಾಣಿಗೇರ, ವೀರುಪಾಕ್ಷಿ ಮುಗಳಖೋಡ, ಸುಭಾಸ ಪೂಜೇರಿ, ವಿ.ಪಿ.ನಾಯಕ, ಕೌಜಲಗಿ ಬ್ಲಾಕ್ ಕಾಂಗ್ರೇಸ್ ಸಮೀತಿ ಪ್ರಕಾಶ ಅರಳಿ, ಅರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ  ಅಧ್ಯಕ್ಷ ಸುರೇಶ ಮಗದುಮ್, ರವಿ ಮೂಡಲಗಿ, ಮಲಿಕ್ ನದಾಫ್, ಸದಾಶಿವ ಹೊಸೂರ, ನೂರಮಹಮ್ಮದ ಪೀರಜಾದೆ, ಲಕ್ಕಪ್ಪ ಶಾಬನವರ,  ಮಲ್ಲಪ್ಪ ಶೆಬನ್ನವರ, ಮದಾರ ಜಕಾತಿ, ಹೊಳೆಪ್ಪ ಶಿವಾಪೂರ, ಮಾಳಪ್ಪ ಬೀದರಿ, ಇರ್ಶಾದ ಪೈಲವ್ವಾನ್, ಸದಾಶಿವ ಮಾಂಗ ಹಾಗೂ ಕಾರ್ಯಕರ್ತರು ಇದ್ದರು 

ಸುದ್ದಿ ಓದಿ