ಯುವಕ ನಾಪತ್ತೆ

ಮೂಡಲಗಿ 26: ಪಟ್ಟಣದ ಕೆ.ಇ.ಬಿ. ಪ್ಲಾಟದ ಸಿದ್ಧಾರೋಡ ಶಂಕರ ಉದಗಟ್ಟಿ(37) ಇತನು ರ್ಮಾ.30ರಂದು ಮಧ್ಯಾಹ್ನ 2ಕ್ಕೆ ಹುಬ್ಬಳಿಗೆ ಕೆಲಸ ಇದೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾನೆ ಎಂದು ಇತನ ಪತ್ನಿ ಶ್ರೀದೇವಿ ಉದಗಟ್ಟಿ ಅವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾಣಿಯಾದ ವ್ಯಕ್ತಿ ಎತ್ತರ 5.1 ಪುಟ ಗೂದಿಗೆಂಪು ಮೈ ಬಣ್ಣ ಸದೃಡ ಮೈಕಟ್ಟು ಇದ್ದು, ಬೂದು ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕನ್ನಡ, ಹಿಂದೆ ಭಾಷೆ ಬಲ್ಲವರಾಗಿರುತ್ತಾರೆ.  

ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಮೂಡಲಗಿ ಪೊಲೀಸ ಠಾಣಿ ದೂರವಾಣಿ ಸಂಖ್ಯೆ 08332-251333 ಹಾಗೂ ಪಿಎಸ್‌ಐ-9480804068 ಗೆ ಸಂಪರ್ಕಿಸಬಹುದು ಎಂದು ಮೂಡಲಗಿ ಪೊಲೀಸ ಠಾಣೆಯ ಆರಕ್ಷಕ ಉಪನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.