ಮೂಡಲಗಿ

ಹೊನಕುಪ್ಪಿ ಗ್ರಾಮದ ಜನರು ನಿಮ್ಮ ಜೊತೆಯಲ್ಲಿದ್ದಾರೆ: ಪ್ರಕಾಶ ಹೆಗಡೆ

ಹೊನಕುಪ್ಪಿ ಗ್ರಾಮದ ಜನರು ನಿಮ್ಮ ಜೊತೆಯಲ್ಲಿದ್ದಾರೆ: ಪ್ರಕಾಶ ಹೆಗಡೆ

ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ 13 ಜನರ ಸಾಮೂಹಿಕ ಶ್ರದ್ಧಾಂಜಲಿ 

ಮೂಡಲಗಿ 18:  ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ನಿಮ್ಮ ಜೊತೆ ಇಡೀ ಹೊನಕುಪ್ಪಿ ಗ್ರಾಮದ ಜನರು ನಿಮ್ಮ ಜೊತೆಯಲ್ಲಿದ್ದಾರೆ ಎಂದು ಗ್ರಾಮದ ಮುಖಂಡ ಪ್ರಕಾಶ ಹೆಗಡೆ ಹೇಳಿದರು. 

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಜರುಗಿದ ಕೋವಿಡ್‌-19 ಸೋಂಕಿನ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ 13 ಜನರ ಸಾಮೂಹಿಕ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊರೋನಾ ಅಲ್ಲೋಲ ಕಲ್ಲೋಲ ಮಾಡಿರುವ ಘಟನೆಯಿಂದ ಪಾರಾಗಿ ಮತ್ತೇ ಜೀವನ ಕಟ್ಟಿಕೊಳ್ಳವ ಸಂದರ್ಭದಲೇ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟ ಎದುರಗಿದೆ. ಆದರೆ ಗ್ರಾಮದ ಜನರು ಯಾವುದೇ ಕಾರಣಕ್ಕೂ ಭಯ ಪಡದೆ ಗ್ರಾಮದ ಎಲ್ಲ ಜನರು ಒಗ್ಗಟ್ಟಿನಿಂದ ಈ ಮಹಾಮಾರಿ ಕೊರೋನಾ ವಿರುದ್ದ ಹೋರಾಟ ಮಾಡೊಣಾ ಎಂದು ಹೇಳಿದರು.  

ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಕೋವಿಡ್‌ದಿಂದ ಮರಣ ಹೊಂದಿದ್ದ ಆತ್ಮಕ್ಕೆ ಶಾಂತಿ ಸಿಗಲು ಗ್ರಾಮಸ್ಥರೆಲ್ಲರೂ ಸೇರಿ ಸಾಮೂಹಿಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು. 

ಗ್ರಾಪಂ ಸದಸ್ಯ ಚಂದ್ರಶೇಖರ ಸಿದ್ದಾಪೂರ ಮಾತನಾಡಿ, ರಾಜ್ಯಕ್ಕೆ ಒಕ್ಕರಿಸಿದ ಕೊರೋನಾ ಹೊಡೆತಕ್ಕೆ ಸಾಕಷ್ಟು ಸಾವು ನೋವುಗಳನ್ನು ಸಂಭವಿಸಿವೆ, ಆದರೆ ನಮ್ಮ ತಾಲೂಕಿನ ಜನರ ರಕ್ಷಣೆಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸ್ವಂತ ಹಣದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಅದು ಅಲ್ಲದೇ  ಕೋವಿಡ್ ಸಂಟರ್ ನಿರ್ಮಾಣ, ಬೆಡ್ ವ್ಯವಸ್ಥೆಗಳನ್ನು ಶೀಘ್ರವಾಗಿ ನಿರ್ಮಿಸಿ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. 

ಗ್ರಾಮದ ಮುಖಂಡ ಶರೀಪ್ ನದಾಫ್ ಮಾತನಾಡಿ, ಗ್ರಾಮದ ಸಾರ್ವಜನಿಕರು ಯಾವದೇ ಕಾರಣಕ್ಕೂ ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳಬೇಕು, ಈ ಕೊರೋನಾ ಮಹಾಮಾರಿಗೆ ಸಂಪೂರ್ಣವಾಗಿ ಮುಕ್ತಿ  ಸಿಗುವವರೆಗೂ ನಾವೆಲ್ಲರೂ ಸಾಮಾಜಿಕ ಅಂತರ, ಮಾಸ್ಕ್‌ ಬಳಿಕೆ ಮಾಡಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ಗಂಗಾಧರ ಮಲ್ಹಾರಿ, ಗ್ರಾಪಂ ಅಧ್ಯಕ್ಷೆ ಜಮೀಲಾ ಮೋಮಿನ್, ಉಪಾಧ್ಯಕ್ಷ ಬಸವರಾಜ ಹೆಗಡೆ, ಹಾಗೂ ರಂಗಪ್ಪ ಪುಗಶೆಟ್ಟಿ, ದುರ್ಗಪ್ಪ ಹಡಗಿನ, ಉಮಾ ಮಠದ, ಮಹಾದೇವಿ ದೊಡ್ಡಗೌಡರ, ಶಾರದಾ ಲಗಳಿ, ಪಾಂಡಪ್ಪ ಹೆಗಡೆ, ಬಸಪ್ಪ ಹೊಸಮನಿ, ಹನುಮಂತ ಹೆಗಡೆ, ಭಿಮಪ್ಪ ಗೊಡಚಿ, ಬಸವರಾಜ ಡೋಣಿ ಹಾಗೂ ಅಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು. 

ಸುದ್ದಿ ಓದಿ