ಪಿಡಿಹಳ್ಳಿ ತಾಲೂಕ ಪಂಚಾಯತ್ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಶಿವರಾಜ
ಬಳ್ಳಾರಿ ( ಪಿ.ಡಿ.ಹಳ್ಳಿ ). ಅ. 10: ಸರ್ಕಾರ ಡಿಸೆಂಬರ್ ನಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲು ಸಕಲ ಸಿದ್ಧತೆಗಳೊಂದಿಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಅವರವರ ಪಕ್ಷದ ನಾಯಕರ ಬಿ ಫಾರ್ ಮತ್ತು ಅನುಮತಿ ಒಂದೇ ಸಿಕ್ಕಲ್ಲಿ ನಾಮಪತ್ರವನ್ನು ಹಿಡಿದು ನಾಮಿನೇಷನ್ ಗೆ ರೆಡಿಯಾಗಿದ್ದಾರೆ. ಅದೇ ಪ್ರಕಾರ ತಾಲೂಕಿನ ಪರಮದೇವನಹಳ್ಳಿ ತಾಲೂಕು ಪಂಚಾಯತಿ ಕ್ಷೇತ್ರಕ್ಕೆ ಸ್ಪರ್ಧ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಿವರಾಜ್ ಸಿದ್ಧತೆ ನಡೆಸಿದ್ದಾರೆ. ಶಿವರಾಜ್ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಕೊಂಡಿದ್ದು ಅವರ ಪತ್ನಿ ಲಕ್ಷ್ಮಿ ದೇವಿ ಈಗಾಗಲೇ ಪೀಡಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಇದೇ ರಾಜಕೀಯ ಹಿನ್ನೆಲೆಯಲ್ಲಿ ಪಿ. ಡಿ ಹಳ್ಳಿ ನಿವಾಸಿ ಶಿವರಾಜ್ ಸಹ ತಾಲೂಕ ಪಂಚಾಯತ್ ಪೀಡಿಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಜನ ಸೇವೆಗೆ ಮುಂದಾಗಿದ್ದಾರೆ. ಗ್ರಾಮೀಣ ಶಾಸಕ ಬಿ ನಾಗೇಂದ್ರ ಅವರ ಕಟ್ಟಾ ಬೆಂಬಲಿಗ ಆಗಿರುವ ಶಿವರಾಜ್ ಈಗಾಗಲೇ ಹಲವು ಸಂಘಟನೆಯಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿಯೂ ಸಹ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಮತ್ತು ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರ ಒಡನಾಟವನ್ನು ಸಹ ಹೊಂದಿದ್ದಾರೆ ಎಲ್ಲರೊಂದಿಗೂ ಬೆರೆತು ಹೋಗುವ ಗುಣಲಕ್ಷಣವುಳ್ಳ ಪಿ. ಡಿ ಹಳ್ಳಿ ಶಿವರಾಜ್ ಹಲವಾರು ಜನ ಯುವಕರಿಗೆ ಮಾರ್ಗದರ್ಶಕರಾಗಿ ಅವರದೇ ಆದ ಒಂದು ಯುವಸಮೂಹವನ್ನು ಪಿ ಡಿಹಳ್ಳಿ ಕ್ಷೇತ್ರದಲ್ಲಿ ಹೊಂದಿದ್ದಾರೆ, ಹಿರಿಯರು ಮತ್ತು ಮಹಿಳೆಯರು ಸಹ ಜನಾನುರಾಗಿ ಶಿವರಾಜ್ ತಾಲೂಕ ಪಂಚಾಯತ್ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದಲ್ಲಿ ಮತ ನೀಡಿ ಗೆಲ್ಲಿಸುವುದಾಗಿ ಈಗಾಗಲೇ ಭರವಸೆಯನ್ನು ಸಹ ನೀಡಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಿವರಾಜ್ ತನ್ನ ರಾಜಕಾರಣದಲ್ಲಿ ್ರ್ರಥಮ ಇನಿಂಗ್ಸ್ ಅನ್ನು ತಾಲೂಕ ಪಂಚಾಯತಿ ಚುನಾವಣೆಯಿಂದ ಆರಂಭಿಸಲು ಸಕಲ ಸನ್ನದ್ಧತೆಯನ್ನು ಮಾಡಿಕೊಂಡಿದ್ದಾರೆ. ಶಿವರಾಜ್ ಪಕ್ಷದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯುವಕ ಶಿವರಾಜ್ ಅವರಿಗೆ ಪೀಡಿಹಳ್ಳಿ ಪರಮದೇವನಹಳ್ಳಿ ತಾಲೂಕು ಪಂಚಾಯತ್ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಪಕ್ಷಕ್ಕೆ ಒಂದು ತಾಲೂಕ ಪಂಚಾಯತ್ ಕ್ಷೇತ್ರ ನಿಕ್ಕಿಯಾಗಲಿದೆ ಎಂದು ಶಿವರಾಜ್ರವರರ ಹಿತೈಷಿಗಳು ಮಾತನಾಡಿಕೊಳ್ಳುತ್ತಿದ್ದಾರೆ.