ಶಿವನೂರ್ ವಿವಿಧೋದ್ದೇಶ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಪುತ್ರ ಬೇವನೂರ್ ಅವಿರೋಧ ಆಯ್ಕೆ
Shivaputra Bevanur elected unopposed as the President of Shivanur Multipurpose Agricultural Cooperat
ಸಂಬರಗಿ 29: ಶಿವನೂರ್ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಶಿವಪುತ್ರ ರಾವಸಾಬ ಬೇವನೂರ್ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ರಾಘವೇಂದ್ರ ನುಲಿ ಘೋಷಣೆ ಮಾಡಿದರು. ಸಂಘದಲ್ಲಿ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಬ್ಯಾಂಕ್ ನೀರೀಕ್ಷಕ ಮಹಾದೇವ ಉಳಾಗಡ್ಡಿ ಇದ್ದರು. ನೂತನ ಅಧ್ಯಕ್ಷ ಶಿವಪುತ್ರ ಬೇವನೂರ್ ಅವರು ಮಾತನಾಡಿ ಶಾಸಕ ಲಕ್ಷ್ಮಣ ಸವದಿ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮತ್ತು ಸಹಕಾರ ಸಂಘವನ್ನು ಅಭಿವೃದ್ಧಿಗಾಗಿ ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳಿದರು. ರೈತರ ಹಿತಕ್ಕಾಗಿ ಕೆಲಸ ಮಾಡುವ ಮೂಲಕ, ರಾಜ್ಯಗಳಲ್ಲಿ ಅದನ್ನು ಆದರ್ಶ ಸಂಘವನ್ನಾಗಿ ಮಾಡುತ್ತೇನೆ ಎಂದು ಅವರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಹೂವಾನಾ ಮಾನೆ, ಸಂಘದ ನಿರ್ದೇಶಕ ಅಪ್ಪಾಸಾಹೇಬ ತಮ್ಮಣ್ಣ ಕಿರಣಗಿ, ಅಶೋಕ ನಿಂಗಪ್ಪ ಕಿರಣಗಿ, ಸಂಭಾಜಿ ಬಾವುಸಾಹೇಬ ವಾಘಮೋಡೆ, ರೋಹಿತ್ ಗುರಾ್ಪ ಮಗದುಮ, ರಾವಸಾಹೇಬ ಶಿವರಾಯ್ ಘುಗರಿ, ಪಂಡಿತ್ ಚಂದ್ರಾ್ಪ ಕಾಂಬಳೆ, ಸುಖದೇವ್ ಕೆಚಪ್ಪಾ ಸನದಿ, ಅವ್ವನ ಕಲ್ಲಪ್ಪ ವಾಗರೇ, ಸರಸ್ವತಿ ಜೋತ್ಯಪ್ಪಾ ಆಜೂರು, ರೇಖಾ ಸದಾನಂದ್ ಬಿರಾದಾರ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ಆಜೂರು, ಶ್ರೀಶೈಲ್ ಪಾಟೀಲ್, ಕಾವೇರಿ ಕೋಳಿ, ಗ್ರಾಮದ ಹಿರಿಯ ಮುಖಂಡರಾದ ತಮಣ್ಣ ಪೂಜಾರಿ, ಅಪ್ಪಾಸಾಹೇಬ ಮಾಳಿ, ಅಣ್ಣಾಸಾಹೇಬ ಅಡಹಳ್ಳಿ, ಬಿ.ಬಿ.ಆಜೂರು, ಕರಣ್ ಬೇವನೂರ, ಅಪ್ಪಾಸಾಹೇಬ ಮಾಳಿ, ಪರಾ್ಪ ಕರುಣ್ ಬೇವನೂರ್, ಗುರುಪುತ್ರ ಬೇವನೂರ, ಅಣ್ಣಾಸಾಹೇಬ ಮಾನೆ, ಸಂಘದ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 