12 ವರ್ಷಗಳಿಂದ ಎಂ.ಆರ್.ಎನ್.ಫೌಂಡೇಶನ್‌ದಿಂದ ಜನಸೇವೆ: ಲಕ್ಷ್ಮಣ ನಿರಾಣಿ
ಬೀಳಗಿ 23: ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಲ್ಲಿ ಆರೋಗ್ಯವಂತರು ಎನ್ನುತ್ತೇವೆ. ಆರೋಗ್ಯವಂತ ಸಮಾಜದಿಂದ ನಾಡಿನ ಸಮಸ್ಯೆಗಳು, ನಿರುದ್ಯೋಗ ನಿವಾರಣೆಯಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲಿದೆ. ಈ ಉದ್ದೇಶಕ್ಕಾಗಿ ಉಚಿತ ವಿವಿಧ ಶಿಬಿರಗಳನ್ನು ನಿರಾಣಿ ಪೌಂಡೇಶನ್ ಹಮ್ಮಿಕೊಂಡು ಜನರ ಸೇವೆ ಮಾಡುತ್ತಿದೆ ಎಂದು ಯುವ ಉದ್ಯಮಿ ಲಕ್ಷ್ಮಣ ಆರ್. ನಿರಾಣಿ ಹೇಳಿದರು.
ತಾಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಸಮುದಾಯ ಭವನದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರ 60ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಎಂ.ಆರ್.ಎನ್.(ನಿರಾಣಿ) ಪೌಂಡೇಶನ್, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹ್ರದಯರೋಗ ವಿಭಾಗ (ಇಜಿಸಿ ಮತ್ತು ಇಕೋ )ನರರೋಗ ವಿಭಾಗ, ಮೂತ್ರಪಿಂಡದ ಮತ್ತು ಮೂತ್ರಪಿಂಡದ ಕಲ್ಲು ವಿಭಾಗ, ಕ್ಯಾನ್ಸರ್ ವಿಭಾಗಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಆರ್.ಎನ್.ಫೌಂಡೇಶನ್ ಕಳೆದ 12 ವರ್ಷಗಳಿಂದ ಜನಪರ ಸೇವೆಯಲ್ಲಿ ತೊಡಗಿದೆ. ಆರೋಗ್ಯ ತಪಾಸಣೆ, ನೇತ್ರ ಶಿಬಿರ, ಕೃಷಿ ವಿಚಾರ ಸಂಕಿರಣ, ಕೃಷಿ ಅಧ್ಯಯನ ಪ್ರವಾಸ, ಮಕ್ಕಳ ಶಿಕ್ಷಣಕ್ಕೆ ಸಹಾಯ, ಕೃಷಿ ಸಂಶೋಧನೆ, ವ್ಯಕ್ತಿತ್ವ ವಿಕಸನ ಶಿಬಿರ, ಕೌಶಲ್ಯ ಅಭಿವೃದ್ಧಿ ಶಿಬಿರ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಸುಮಾರು 1ಲಕ್ಷಕ್ಕೂಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ, ಸುಮಾರು 28 ಸಾವಿರ ಜನರ ವಿವಿಧ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದ ಅವರು ಪೌಂಡೇಶನ್ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಬಹಳಷ್ಟು ಕುಟುಂಬಗಳಿಗೆ ಇದು ನೆರವಾಗಿದೆ. ಬೆಳಗಾವಿಯ ಕೆ.ಎಲ್.ಇ.ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎನ್.ಜೋಶಿ ನೇತ್ರ ಸಂಶೋಧನಾ ಸಂಸ್ಥೆ. ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ನಮ್ಮ ಆರೋಗ್ಯ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು, ಬೋರ್ಜಿ, ಎಂ.ಎಂ.ಶಂಭೋಜಿ, ವಿ.ಜಿ ರೇವಡಿಗಾರ್, ಮಲ್ಲಿಕಾಜುನ ಅಂಗಡಿ, ಬಸವಂತಪ್ಪ ಸಂಕಾನಟ್ಟಿ, ಬಸವರಾಜ್ ಉಮಚಗಿಮಠ, ಹೊಳೆಬಸು ಬಾಳಶೆಟ್ಟಿ, ವಿಠ್ಠಲ ನಿಂಬಾಳ್ಕರ, ರಾಮಣ್ಣ ಡವಳೇಶ್ವರ, ಮಹದೇವಪ್ಪ ಹತ್ತರಿಕ್ಕಿಹಾಳ ಮತ್ತು ಸಪ್ತಗಿರಿ ಆಸ್ಪತ್ರೆಯ ಡಾ.ಬಾಲಕೃಷ್ಣ, ಡಾ.ಸಚಿನ್ ಪಾಟೀಲ ಮತ್ತು ಡಾ.ಗೋಪಾಲಕೃಷ್ಣ ಶಿಬಿರದ ನೇತೃತ್ವ ವಹಿಸಿದ್ದರು.