ಮೂಡಲಗಿ

ಅಮಾನತ್ ಅರ್ಬನ್ ಸೊಸಾಯಟಿಗೆ ಅವಿರೋಧ ಆಯ್ಕೆ

ಅಮಾನತ್ ಅರ್ಬನ್ ಸೊಸಾಯಟಿಗೆ ಅವಿರೋಧ ಆಯ್ಕೆ

ಮೂಡಲಗಿ 08: ಸ್ಥಳೀಯ ಅಮಾನತ್ ಅರ್ಬನ್ ಕೊ-ಆಫ್ ಕ್ರೆಡಿಟ ಸೊಸಾಯಿಟಿಗೆ ಸನ್ 2021-26 ಅವಧಿಗೆ  ನಡೆದ ಆಡಳಿತ ಮಂಡಳಿ ಚುನಾಣೆಯಲ್ಲಿ ಎಲ್ಲ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡು ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾಣೆಯಲ್ಲಿ ಅಧ್ಯಕ್ಷರಾಗಿ ಅಬ್ದುಲ್‍ಗಫಾರ ಇಮಾಮಹುಸೇನ ಡಾಂಗೆ, ಉಪಾಧ್ಯಕ್ಷರಾಗಿ ಇದ್ರೀಶ ಮಹ್ಮದಸಾಬ ಕಲಾರಕೊಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಕೆ.ಗೋಖಲೆ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ಅಬ್ದುಲ್‍ಅಜೀಜ ಡಾಂಗೆ, ಕುತುಬುದ್ದೀನ ನೇಸರಗಿ, ಮಲೀಕಸಬ ಪಾಶ್ಚಾಪುರ, ಮಲೀಕ ಮೊಗಲ್, ಮಹ್ಮದರಫೀಕ ತಾಂಬೂಳೆ, ಹುಸೇನ ಥರಥರಿ, ಬಸೀರಹ್ಮದ ಪೀರಜದೆ, ಗಜಾಲಾ ಗೋಕಾಕ, ನಜಮನ್ನಿಸಾ ಡಾಂಗೆ, ಸಂಗಪ್ಪ ಗಾಡಿಕಾರ ಉಪಸ್ಥಿತರಿದ್ದರು.

ಸುದ್ದಿ ಓದಿ