ಎರಡನೇ ಹಂತದ ಲಸಿಕೆ ಅಭಿಯಾನ ಕಾರ್ಯಕ್ರಮ
ಮೂಡಲಗಿ 10: ಎರಡನೇ ಹಂತದ ಲಸಿಕೆ ಅಭಿಯಾನ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಜಿ ಪುರಸಭೆ ಸದಸ್ಯ ಡಾ.ಎಸ್ ಎಸ್ ಪಾಟೀಲ ಅವರು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಧೈರ್ಯವಾಗಿ ಲಸಿಕೆ ಪಡೆದು ಕೊರೋನಾ ಮುಕ್ತ ದೇಶಕ್ಕಾಗಿ ಸಹಕರಿಸಿ ಎಂದು ತಾವೇ ಕೋವಿಡ್ ಲಸಿಕೆಯನ್ನು ಪಡೆದರು