ಮೂಡಲಗಿ

ಸತೀಶ್ ಜಾರಕಿಹೊಳಿಯವರು ಸಮರ್ಥ ಅಭ್ಯರ್ಥಿ ಗೆಲುವು ನಿಶ್ಚಿತ: ಪಾಟೀಲ

ಸತೀಶ್ ಜಾರಕಿಹೊಳಿಯವರು ಸಮರ್ಥ ಅಭ್ಯರ್ಥಿ ಗೆಲುವು ನಿಶ್ಚಿತ: ಪಾಟೀಲ
ಮೂಡಲಗಿ ಶಿವಬೋಧರಂಗ ಸೊಸೈಟಿಯಲ್ಲಿ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಜಿ ಎಸ್ ಪಾಟೀಲ ಮಾತನಾಡಿದರು.

ಮೂಡಲಗಿ 04: ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿ ಸತೀಶ್ ಜಾರಕಿಹೊಳಿಯವರು ಸಮರ್ಥ ಅಭ್ಯರ್ಥಿಯಾಗಿದ್ದು  ಅವರ ಗೆಲುವು ನಿಶ್ಚಿತ ಎಂದು ರೋಣ ಮಾಜಿ ಶಾಸಕ ಜಿ ಎಸ್ ಪಾಟೀಲ ಹೇಳಿದರು. 

ಶಿವಬೋಧರಂಗ ಸೊಸೈಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರೋಣ ಮಾಜಿ ಶಾಸಕ ಜಿ ಎಸ್ ಪಾಟೀಲ ಮಾತನಾಡಿದರು.

ಸತೀಶ್ ಜಾರಕಿಹೊಳಿಯವರು ಸಮರ್ಥ ಅಭ್ಯರ್ಥಿಯಾಗಿದ್ದು, ಚುನಾವಣೆಯಲ್ಲಿ ಗೆಲ್ಲುವ ಚಾಕಚಕ್ಯತೆ ಮತ್ತು ಸಾಮರ್ಥ್ಯ ಅವರಿಗಿದೆ. ಸದ್ಯ ಜನ ಬದಲಾವಣೆ ಬಯಸುತ್ತಿದ್ದಾರೆ ರಾಜ್ಯ ಮತ್ತು ಕೇಂದ್ರಗಳಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿ  ನೀತಿಗಳಿಂದಾಗಿ ಜನತೆ ರೋಷಿಹೋಗಿದ್ದಾರೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ವಿರೋಧಿ ಮಸೂದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಮೋದಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ.  ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ನರಗುಂದ ಶಾಸಕ ಬಿ ಆರ್ ಯಾವಗಲ್ ಮಾತನಾಡಿ, ಈ ಚುನಾವಣೆಯಲ್ಲಿ ಕಾರ್ಯಕರ್ತರು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ ಸತೀಶ ಜಾರಕಿಹೊಳಿಯವರನ್ನು ಭಾರಿ ಅಂತರದಲ್ಲಿ ಗೆಲ್ಲಿಸುವಲ್ಲಿ ಶ್ರಮಿಸಬೇಕು ಎಂದರು. 

 ಬೀಳಗಿ ಮಾಜಿ ಶಾಸಕ ಜಿ ಟಿ ಪಾಟೀಲ ಮಾತನಾಡಿದರು. ಸಭೆಯಲ್ಲಿ ಮುಖಂಡ ಡಿ ಆರ್ ಪಾಟೀಲ, ರಾಮಕೃಷ್ಣ ದೊಡಮನಿ, ಜಿ ಎಸ್ ಗಡ್ಡದೇವರಮಠ, ಗಂಗಪ್ಪ ಹಳ್ಳೂರ, ಎಸ್ ಆರ್ ಸೋನವಾಲ್ಕರ, ಕೆ ಟಿ ಗಾಣಿಗೇರ, ಮಲ್ಲಿಕಾರ್ಜುನ ಕಬ್ಬೂರ, ರವೀಂದ್ರ ಸಣ್ಣಕ್ಕಿ, ಆರ್ ಪಿ ಸೋನವಾಲ್ಕರ,ಅಪ್ಪಾಸಾಬ ಹೊಸಕೋಟಿ, ಬಸವರಾಜ ಗುಲಗಾಜಂಬಗಿ, ಕೆ ಬಿ ಪಾಟೀಲ, ಬಾಬು ಸೋನವಾಲ್ಕರ, ವಿಜಯ ಸೋನವಾಲ್ಕರ, ಗುರು ಗಂಗನ್ನವರ, ಮಲೀಕ ಹುಣಶ್ಯಾಳ, ಹೊಳೆಪ್ಪ ಶಿವಾಪೂರ, ಮಾಹಾನಿಂಗಯ್ಯಾ ನಂದಗಾಂವಮಠ ಇಜಾಜ ಕೊಟ್ಟಲಗಿ ಹಾಗೂ ಅನೇಕ ಕಾರ್ಯಕರ್ತರು ಇದ್ದರು.

ಸುದ್ದಿ ಓದಿ