ಸಂಕೇಶ್ವರದಲ್ಲಿ 19ರಂದು ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ : ಅಮರ ನಲವಡೆ
ಸಂಕೇಶ್ವರ : ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಗಳನ್ನು ನಗರದಲ್ಲಿ ಆಯೋಜಿಸಲಾಗಿದೆ. 19ರಂದು ಸಂಜೆ 5 ಗಂಟೆಗೆ ಈ ಪ್ರತಿಮೆ ಅನಾವರಣಗೋಳ್ಳಲಿದೆ ಎಂದು ಪ್ರತಿಮೆ ಪ್ರತಿಸ್ಠಾಪನಾ ಕಮಿಟಿ ಉಪಾಧ್ಯಕ್ಷ ಅಮರ ನಲವಡೆ ಇಂದಿಲ್ಲಿ ಹೇಳಿದರು.
ಮಂಗಳವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿ. 15ರಂದು ಪ್ರತಿಮೆಯು ಕೊಲ್ಲಾಪುರದಿಂದ ನಗರಕ್ಕೆ ಆಗಮನವಾಗಲಿದೆ. ದಿ. 16ರಂದು ಪ್ರತಿಮೆಯ ಮೆರವಣಿಗೆ, ಶೋಭಾಯಾತ್ರೆ ಶಂಕರಲಿಂಗ ಮಠದಿಂದ ಶ್ರೀಗಳ ನೇತೃತ್ವದಲ್ಲಿ ಪ್ರಾರಂಭವಾಗಲಿದೆ. ದಿ. 18ರಂದು ಬೆಳಿಗ್ಗೆ 7 ಗಂಟೆಗೆ ನಿಡಸೋಸಿ ಶಿವಲಿಂಗೇಶ್ವರ ಮತ್ತು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಶ್ರೀಗಳ ಹಸ್ತದಿಂದ ಪ್ರತಿಮೆ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಿವಕಲ್ಯಾಣ ರಾಜಾ ನೃತ್ಯ ನಾಟ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಅದರಂತೆ ದಿ. 19ರಂದು ಸಂಜೆ 5 ಗಂಟೆಗೆ ಪ್ರತಿಮೆ ಅನಾವರಣ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಿವಾಜಿ ಮಹಾರಾಜರ ವಂಶಸ್ಥರು ಆಗಮಿಸಲಿದ್ದಾರೆ. ಅಲ್ಲದೆ ಬೆಂಗಳೂರಿನ ಗೋಸಾವಿ ಮಠದ ಮಂಜುನಾಥ ಶ್ರೀಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಹತ್ತರಿಗಿ ಕಾರಿಮಠದ ಸಿದ್ದೇಶ್ವರ ಶ್ರೀ, ಉ. ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯ ಸಾನಿದ್ಯದಲ್ಲಿ ಭಗವಾನಗೀರಿ ಶ್ರೀ ಇವರು ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ ಕಾರಜೋರ ನಡೆಸುವರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ, ಮಾಜಿ ಸಂಸದರಾದ ಛತ್ರಪತಿ ಸಂಭಾಜಿರಾಜೆ ಯುವರಾಜ, ರಮೇಶ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಸತೀಶ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಳಾ ಅಂಗಡಿ, ಈರಣ್ಣ ಕಡಾಡಿ, ಹಿರಾಶುಗರ ಅಧ್ಯಕ್ಷ ನಿಖೀಲ ಕತ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಮುಖಂಡರು ಭಾಗಿಯಾಗಲಿದ್ದಾರೆ ಎಂದು ನುಡಿದರು.
ಈ ವೇಳೆ ಆನೆ, ಕುದರಿ ಸೇರಿದಂತೆ ಅನೇಕ ವಾದ್ಯವೃಂದ ತಂಡಗಳು ಇದರಲ್ಲಿ ಭಾಗಿಯಾಗಲಿವೆ. ಸುಮಾರು 500 ಮಹಿಳೆಯರು ಕುಂಬ ಹೊತ್ತು ಸಾಗಲಿದ್ದಾರೆ ಎಂದು ನುಡಿದರು. ಈ ಪ್ರತಿಮೆಗೆ 16.5 ಲಕ್ಷ ಹಾಗೂ 15 ಲಕ್ಷ ಕಟ್ಟಡ ಸೇರಿ ಇತರ ಖರ್ಚು ಮಾಡಲಾಗಿದೆ. ಕೊಲ್ಲಾಪುರದಲ್ಲಿ ಪ್ರತಿಮೆ ತಯಾರಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಮೆ ಕಮೀಟಿ ಅಧ್ಯಕ್ಷ ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಅಭಿಜೀತ ಕುರಣಕರ, ಜೈಪ್ರಕಾಶ ಸಾವಂತ, ಅವಿನಾಶ ನಲವಡೆ, ಗಿರೀಶ ಕುಲಕರ್ಣಿ, ಪವನ ಪಾಟೀಲ, ರಾಜು ಗಾಯಕವಾಡ್, ಮಹಾದೇವ ಮಾಡಿಕ್, ಪುಷ್ಪರಾಜ ಮಾನೆ, ಸಂದೀಪ ದವಡತೆ, ಜೈಪ್ರಕಾಶ ಖಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.