ಸದ್ಗುರುವಿಗೆ ಕಾವ್ಯದಿಂಚರ ಗ್ರಂಥ ಲೋಕಾರೆ್ಣ
Sadhguru's Kavyadinchara Granth is a world-renowned
ದೇವರಹಿಪ್ಪರಗಿ 30: ತಾಲೂಕಿನ ಭೈರವಾಡಗಿ(ಘೋಡಗೇರಿ) ಗ್ರಾಮದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ ಸಂಪಾದನ ಕಾವ್ಯ ಸಂಕಲನ ದೇವರಹಿಪ್ಪರಗಿ ತಾಲೂಕು ಸಾಹಿತ್ಯ ಸಮ್ಮೇಳನದ ಮಾಜಿ ಸರ್ವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಸಂಗಮೇಶ ಕೆರೆಪ್ಪಗೋಳ ವಿರಚಿತ "ಸದ್ಗುರುವಿಗೆ ಕಾವ್ಯದಿಂಚರ"ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಹನುಮಾನ್ ಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ರವಿವಾರದಂದು ಬಿಡುಗಡೆಗೊಂಡಿತು.ಸ್ಥಳೀಯ ಮಠದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಸಾನಿಧ್ಯವನ್ನು ಕಡಕೋಳ ಗ್ರಾಮದ ವೇ.ಮೂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಭೈರವಾಡಗಿ (ಘೋಡಗೇರಿ) ಗ್ರಾಮದ ಪ.ಪೂ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ "ಸದ್ಗುರುವಿಗೆ ಕಾವ್ಯದಿಂಚರ" ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಸಂಗಮೇಶ ಕೆರೆಪ್ಪಗೋಳ ವಿರಚಿತ ಕೃತಿಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾಳವಾರ ಗ್ರಾಮದ ವೇ.ಮೂ ಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.ಸಂಪಾದಕರು, ಹಿರಿಯ ಕಲಾವಿದ-ವಿದ್ವಾಂಸರಾದ ಸಂಗಮೇಶ ಕೆರೆಪ್ಪಗೋಳ ಅವರ ವಿರಚಿತ 9ನೇ ಕೃತಿ ಲೋಕಾರೆ್ಣ ಮಾಡಲಾಯಿತು.ಗ್ರಂಥ ಮುದ್ರಣ ಲೋಕಾರ್ಣಕ್ಕೆ ಗ್ರಾಮದ ಅರಕ್ಷಕರಾದ ರಾಘವೇಂದ್ರ ಗು. ದೇವೂರ ದಾಸೋಹ ಸೇವೆಯನ್ನು ನೀಡಿದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಾಹಿತ್ಯ ಆಸಕ್ತದಾರರು ಇದ್ದರು.ಕಾರ್ಯಕ್ರಮದ ನಿರೂಪಣೆ ಆಯ್.ಎಲ್.ಶಾಬಾದಿ ಹಾಗೂ ಸಿ.ಕೆ. ಕಿರಣಗಿ ಸ್ವಾಗತಿಸಿ, ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 