ಅಂತರರಾಷ್ಟ್ರೀಯ

ಶ್ರೀಲಂಕಾ : ಕೋವಿಡ್ ಪ್ರಕರಣ 88 ಸಾವಿರಕ್ಕೆ ಹೆಚ್ಚಳ

ಶ್ರೀಲಂಕಾ : ಕೋವಿಡ್ ಪ್ರಕರಣ 88 ಸಾವಿರಕ್ಕೆ ಹೆಚ್ಚಳ

ಕೊಲಂಬೋ, ಮಾರ್ಚ್ 16: ಶ್ರೀಲಂಕಾದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 88 ಸಾವಿರ ದಾಟಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ಮಾರ್ಚ್‌ನಿಂದ ಶ್ರೀಲಂಕಾದಲ್ಲಿ 88,238 ಸಕಾರಾತ್ಮಕ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, 84,969 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದರಿಂದಾಗಿ ಸಕ್ರಿಯ ರೋಗಿಗಳ ಸಂಖ್ಯೆ 2,737 ಕ್ಕೆ ಇಳಿದಿದೆ. ಸಾವಿನ ಸಂಖ್ಯೆ 532 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಫೆಬ್ರವರಿಯಲ್ಲಿ ಶ್ರೀಲಂಕಾವು ದೇಶದ ಪಶ್ಚಿಮ ಪ್ರಾಂತ್ಯದಲ್ಲಿ ರಾಜಧಾನಿ ಕೊಲಂಬೊ ಸೇರಿದಂತೆ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿ,  750,000 ಕ್ಕೂ ಹೆಚ್ಚು ಜನರಿಗೆ ಅಸ್ಟ್ರಾಜೆನೆಕಾ ಲಸಿಕೆಗಳನ್ನು ಚುಚ್ಚುಮದ್ದು ನೀಡಲಾಗಿದೆ.

    


ಸುದ್ದಿ ಓದಿ