ಅಂತರರಾಷ್ಟ್ರೀಯ

ಸೆನೆಗಲ್ ನಲ್ಲಿ ಗಲಭೆ, ಅಶಾಂತಿ : ಕನಿಷ್ಠ 5 ಜನರ ಸಾವು

ಸೆನೆಗಲ್ ನಲ್ಲಿ ಗಲಭೆ, ಅಶಾಂತಿ :  ಕನಿಷ್ಠ 5 ಜನರ  ಸಾವು

ಡಾಕರ್, ಮಾರ್ಚ್ 9:ಪ್ರತಿಪಕ್ಷ ನಾಯಕ  ಸ್ಮಾನೆ ಸೊನ್ಕೊ ಅವರ ಬಂಧನ ಮತ್ತು ಸೆನೆಗಲ್ ವಿವಿಧ ನಗರಗಳಲ್ಲಿ  ಪೊಲೀಸರೊಂದಿಗೆ ನಡೆದ ಘರ್ಷಣೆ, ಗಲಭೆಯಲ್ಲಿ   ಕನಿಷ್ಠ ಐವರು  ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಗಳು ಸ್ಪುಟ್ನಿಕ್ ಗೆ ತಿಳಿಸಿವೆ. ಕಳೆದ ಗುರುವಾರ ರಾಜಧಾನಿ ಡಾಕರ್ ಮತ್ತು ಇತರ ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು ಇದರ ಜೊತೆಗೆ  ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯಗಳು ಮತ್ತು ಲೂಟಿ ನಿರತ ಕೆಲಸವೂ ಜರುಗಿತ್ತು . ಕಳೆದ ಗುರುವಾರ ಅತ್ಯಾಚಾರ ಆರೋಪದ ಮೇಲೆ ಸೋಂಕೊ ಅವರನ್ನು  ಬಂಧಿಸಲಾಗಿದ್ದು ನಂತರ   ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು  ಇದು  ರಾಜಕೀಯ ಪ್ರೇರಿತ ಮತ್ತು ಸೇಡಿನ ಕ್ರಮ ಎಂದು  ಅವರು ಬಳಿಕ ವಾಗ್ದಾಳಿ ನಡೆಸಿದ್ದರು. 




ಸುದ್ದಿ ಓದಿ