ಅಂತರರಾಷ್ಟ್ರೀಯ

ಇರಾಕ್, ಅಫ್ಘಾನಿಸ್ತಾನದಲ್ಲಿ ಸೇನಾ ಕಡಿತ, ನಿರ್ಧಾರ ಕೈಗೊಳ್ಳದ ಅಮೆರಿಕ

ಇರಾಕ್, ಅಫ್ಘಾನಿಸ್ತಾನದಲ್ಲಿ ಸೇನಾ ಕಡಿತ, ನಿರ್ಧಾರ ಕೈಗೊಳ್ಳದ ಅಮೆರಿಕ

ವಾಷಿಂಗ್ಟನ್, ಫೆಬ್ರವರಿ 3 : ಇರಾಕ್ ಅಥವಾ ಅಫ್ಘಾನಿಸ್ತಾನದಲ್ಲಿನ ಸೇನಾ ಕಡಿತ ಮಾಡುವ,  ವಾಪಸ್ ಕರೆಸಿಕೊಳ್ಳುವ ಬಗ್ಗೆ ಅಮೆರಿಕ ಸದ್ಯ  ಯಾವುದೇ ತೀರ್ಮಾನ  ಮಾಡಿಲ್ಲ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದರು ಸುದ್ದಿಗಾರರರ ಜೊತೆ ಮಾತನಾಡಿದ ಅವರು,ಇರಾಕಿನಲ್ಲಿ  ಪ್ರಸ್ತುತ ಸೇನೆ ಸಂಖ್ಯೆ 2,500 ರಷ್ಟಿದೆ ಎಂದು ನಾನು ಭಾವಿಸಿದ್ದು ಇದರಲ್ಲಿ  ಯಾವುದೇ ಬದಲಾವಣೆಗಳಿಲ್ಲ  ಎಂದು ಕಿರ್ಬಿ ಹೇಳಿದರು. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ,ಈವರೆಗೆ ಯಾವುದೇ  ಸೇನಾ ಕಡಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ ಆದರೆ ಬಿಕ್ಕಟ್ಟು ರಾಜಕೀಯವಾಗಿ ಇತ್ಯರ್ಥವಾಗಬೇಕು  ಎಂಬುದಕ್ಕೆ  ಅಮೆರಿಕ ಬದ್ದವಾಗಿದೆ ಎಂದೂ  ಅವರು ಹೇಳಿದರು. 




ಸುದ್ದಿ ಓದಿ