ಆಫ್ಘನ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಸಾವು
ಕಾಬೂಲ್, ಜ 10 : ಆಫ್ಘಾನಿಸ್ತಾನದ ನೈರುತ್ಯ ಪ್ರಾಂತ್ಯದ ನಿಮ್ರೂಜ್‌ನಲ್ಲಿ ದೇಶದ ವಾಯುಪಡೆ ನಡೆಸಿದ ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಬಹರಾಮ್ ಹಕ್ಮಲ್ ಭಾನುವಾರ ಖಚಿತಪಡಿಸಿದ್ದಾರೆ.ಆಫ್ಘನ್ ಪಡೆಗಳು ಕಳೆದ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಖಶ್ ರಾಡ್ ಜಿಲ್ಲೆಯ ಮಂಜಾರಾ ಪ್ರದೇಶದಲ್ಲಿ ಒಂದೇ ಕುಟುಂಬದ 15 ಸದಸ್ಯರು(ಎಲ್ಲರೂ ನಾಗರಿಕರು) ಸಾವನ್ನಪ್ಪಿದ್ದಾರೆ ಎಂದು ಶನಿವಾರ ಪ್ರಾಂತ್ಯದ ನಾಗರಿಕ ಮೂಲವೊಂದು ಸ್ಪುಟ್ನಿಕ್ ಗೆ ತಿಳಿಸಿದೆ. ದಾಳಿ ಕುರಿತಂತೆ ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.