ರಷ್ಯಾ : 24 ಗಂಟೆಯಲ್ಲಿ 8,832 ಹೊಸ ಕೋವಿಡ್ ಪ್ರಕರಣ ದಾಖಲು
ಮಾಸ್ಕೊ, ಜೂನ್ 02: ಕಳೆದ 24 ಗಂಟೆಗಳಲ್ಲಿ ರಷ್ಯಾ 8,832 ಹೊಸ ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 5,090,249 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ಬುಧವಾರ ತಿಳಿಸಿದೆ. "ಕಳೆದ ದಿನದಲ್ಲಿ, 84 ರಷ್ಯಾದ ಪ್ರದೇಶಗಳಲ್ಲಿ 8,832 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 1,153 ಪ್ರಕರಣಗಳಲ್ಲಿ ಕ್ಲಿನಿಕಲ್ ಲಕ್ಷಣಗಳಿಲ್ಲ" ಎಂದು ಕೇಂದ್ರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಮಾಸ್ಕೋ 2,842 ಹೊಸ ಕೊರೋನಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದೆ. ದೇಶದ್ಯಾಂತ ಸಾವಿನ ಸಂಖ್ಯೆ 122,267 ಕ್ಕೆ ಏರಿಕೆಯಾಗಿದೆ. ಅದೇ 24 ಗಂಟೆಗಳಲ್ಲಿ, ದೇಶಾದ್ಯಂತ ಚೇತರಿಸಿಕೊಂಡಂತೆ 9,020 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಹಿಂದಿನ ದಿನ 8,994 ರಷ್ಟಿದ್ದು, ಒಟ್ಟು 4,702,599 ಕ್ಕೆ ತಲುಪಿದೆ.