1,48,000-00 ರೂ. ಉಳಿತಾಯ ಬಜೆಟ್ ಮಂಡನೆ
ಮೂಡಲಗಿ 10: ಪುರಸಭೆಯ 2020-21 ನೇ ಸಾಲಿನ ಪರೀಷ್ಕೃತ ಆಯ-ವ್ಯಯ ಮತ್ತು 2021-22 ನೇ ಸಾಲಿನಲ್ಲಿ: 1,48,000-00 ರೂ ಉಳಿತಾಯ ಬಜೆಟನ್ನು ಪುರಸಭೆಯ ಮುಖ್ಯಾಧಿಕಾರಿ ಡಿ. ಎಸ್. ಹರ್ದಿ ಇವರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆಯ ಅಧ್ಯಕ್ಷ ಹನಮಂತ ಗುಡ್ಲಮನಿ ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ವರದಿ ಮಂಡಿಸಿದರು.
ಸನ್ 2021-22 ನೇ ಸಾಲಿನಲ್ಲಿ 11.35 ಕೋಟಿ ಜಮೆ ಹಾಗೂ 11.34 ಕೋಟಿ ಖರ್ಚು ಇದ್ದು ಇದರಲ್ಲಿ ಪುರಸಭೆ ನಿಧಿಯ 24.10% 3.61ಲಕ್ಷ ಹಾಗೂ 7.25% 1.08 ಲಕ್ಷ ಹಾಗೂ 5% 0.75 ಲಕ್ಷ ಕಾಯ್ದಿರಿಸಲಾಗಿದ್ದು ಅಲ್ಲದೇ ಎಸ್.ಎಫ್.ಸಿ. ಮುಕ್ತನಿಧಿಯಡಿ 24.10% 34.80 ಲಕ್ಷ 7.25% ನಲ್ಲಿ 8.70 ಲಕ್ಷ ಹಾಗೂ 5% ನಲ್ಲಿ 6.00 ಲಕ್ಷ ಕಾಯ್ದಿರಿಸಲಾಗಿರುತ್ತದೆ. ಪಟ್ಟಣದಲ್ಲಿ ರಸ್ತೆ ಕಾಮಗಾರಿಗಳಿಗಾಗಿ ರೂ. 131.5 ಲಕ್ಷ ಚರಂಡಿ ಕಾಮಗಾರಿಗೆ 125.00 ಲಕ್ಷ ಹಾಗೂ ನೀರು ಸರಬರಾಜು ಕಾಮಗಾರಿಗೆ 60.85 ಲಕ್ಷ ಹಾಗೂ ಬೀದಿ ದೀಪ ಕಾಮಗಾರಿಗೆ 23.60 ಲಕ್ಷ ಅಂದಾಜು ಖರ್ಚುಗಳನ್ನು ಸಭೆಯಲ್ಲಿ ವಿವರಿಸಿ 2021-22 ನೇ ಸಾಲಿನ ಆಯ-ವ್ಯಯ ಪತ್ರಿಕೆಗೆ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಪುರಸಭೆಯ ಕಛೇರಿ ವ್ಯವಸ್ಥಾಪಕ ಎಂ ಎಸ್ ಬಿರಾದಾರಪಾಟೀಲ. ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಂ.ಮುಗಳಖೋಡ ಮತ್ತು ಕೆ.ಎಂ.ಆರ್.ಪಿ.ಅಕೌಂಟಂಟ ಆರ್.ಪಿ.ಶೇರಖಾನೆ ಹಾಗೂ ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು.