ರಸ್ತೆಗಳ ಸುಧಾರಣೆ: ರೈತರ ಬೆಳೆಗಳನ್ನು ಮಾರುಕಟ್ಟೆಗೆ ತ್ವರಿತವಾಗಿ ಸಾಗಿಸಲು ಸಾಧ್ಯ
Road improvements: Farmers' crops can be transported to market quickly
ರಾಯಬಾಗ 2: ಗ್ರಾಮೀಣ ಭಾಗದ ತೋಟಪಟ್ಟಿಗಳ ರಸ್ತೆಗಳನ್ನು ಸುಧಾರಿಸುವುದರಿಂದ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತ್ವರಿತವಾಗಿ ಸಾಗಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಡಿ.ಎಮ್.ಐಹೊಳೆಯವರು ಹೇಳಿದರು.
ಮಂಗಳವಾರ ಜಿ.ಪಂ.ಇಲಾಖೆಯಿಂದ ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆಯಡಿ ಮಂಜೂರಾದ 40 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ನಸಲಾಪುರ ಗ್ರಾಮದ ಮಲ್ಲು ಕೋರೆ ತೋಟದಿಂದ ಮನೋಹರ ಸನದಿ ತೋಟದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಯಡ್ರಾಂವ ಗ್ರಾಮದಲ್ಲಿ 30 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಿಬಿಕೆಎಸ್‌ಎಸ್ ಕೆ ನಿರ್ದೇಶಕ ಭರತೇಶ್ ಬನವಣೆ, ನಸಲಾಪುರ ಗ್ರಾ.ಪಂ. ಅಧ್ಯಕ್ಷ ಅರುಣ ನಾಯಕ, ಮಹಾದೇವ ಕಾಂಬಳೆ, ನೇಮಣ್ಣ ಖೋಮಬಾರೆ, ಚೌಗೊಂಡ ಪಾಟೀಲ, ನಿಂಗಪ್ಪ ಕುಂಬಾರ, ರಾಜು ಪರಮಾಜೆ, ಅನೀಲ ಪಾಟೀಲ, ಬಾಳಾಸಾಹೇಬ ಪಾಟೀಲ, ಶಿವಾನಂದ ಕುಂಬಾರ, ಅದಗೌಡ ಪಾಟೀಲ, ಯಡ್ರಾಂವ ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ ಧನಗರ, ಅಕ್ಕತಾಯಿ ಐಹೊಳೆ, ಕಲ್ಲಪ್ಪ ನಿಂಗನೂರೆ, ಹಾಲಪ್ಪ ಧನಗರ, ಬಾಲಚಂದ್ರ ದತ್ತವಾಡೆ, ಸುರೇಶ್ ಐಹೊಳೆ, ಅಜಿತ ಸಂಗಮೇಶ್ವರ, ಮುರುಗೇಶ ಮಾಳಿ, ಶ್ರೀಕಾಂತ ಪಡಲಾಳೆ, ಅಭಯಂತರ ಎಸ್.ಎಸ್.ಹೊಸಮನಿ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 