ಬೆಳೆ ವಿಮೆ ಪರಿಹಾರವನ್ನು ಅವೈಜ್ಞಾನಿಕವಾಗಿ ಬಿಡುಗಡೆ ಖಂಡಿಸಿ ರೈತರಿಂದ ಪ್ರತಿಭಟನೆ
Farmers protest against unscientific release of crop insurance compensation
ಲೋಕದರ್ಶನ ವರದಿ
ವಿಜಯಪುರ 02 ; 2025 -26ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತೊಗರಿ ಬೆಳೆಯ ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ಅವೈಜ್ಞಾನಿಕವಾಗಿ ಬಿಡುಗಡೆ ಮಾಡಿರುವುದನ್ನು ಮರು ಪರೀಶೀಲಿಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿಜಯಪುರ ಜಿಲ್ಲೆಯ ರೈತರ ವತಿಯಿಂದ ವಿಮೆ ಕಂಪನಿ ಕಛೇರಿಯ ಹತ್ತಿರ ಪ್ರತಿಭಟನೆ ಹಮ್ಮಿಕೊಂಡು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಕಛೇರಿ ಸಿಬ್ಬಂಧಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಅರವಿಂದ ಕುಲಕರ್ಣಿ ಮಾತನಾಡಿ, 2025/26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸರಕಾರ ಗುರುತುಪಡಿಸಿದ ಬೆಳೆ ವಿಮಾ ಕಂಪನಿಯಾದ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲೆಯ ರೈತರು ಬೆಳೆವಿಮೆ ಕಂತನ್ನು ಬರೆಸಿದ್ದು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅತಿವೃಷ್ಠಿಯಿಂದಾಗಿ ಬಿತ್ತಿದ ಬೆಳೆ ಎಲ್ಲವೂ ನೀರು ಪಾಲಾಗಿ ರೈತರಿಗೆ ಭರಿಸಲಾರದ ನಷ್ಟ ಸಂಭವಿಸಿದೆ. ಇಂತಹ ತುರ್ತು ಸಂದರ್ಭದಲ್ಲಿ ಗೊತ್ತುಪಡಿಸಿದ ಬೆಳೆ ವಿಮಾ ಕಂಪನಿ ಹಾಗೂ ಸರ್ಕಾರ ರೈತರ ನೆರವಿಗೆ ಧಾವಿಸಬೇಕಾಗಿರುವುದು ಜವಾಬ್ದಾರಿಯಾಗಿರುತ್ತದೆ.
ಈ ಪ್ರಕಾರ ಕಂಪನಿಯು ರೈತರ ಅರ್ಜಿಗಳಿಗನುಗುಣವಾಗಿ ಪರೀಶೀಲಿಸಿ ಮಧ್ಯಂತರ ಬೆಳೆವಿಮೆ ಪರಿಹಾರವನ್ನು ಬಿಡುಗಡೆಗೊಳಿಸಬೇಕಾಗಿತ್ತು. ಜಿಲ್ಲೆಯಾದ್ಯಂತ ವಿಪರೀತ ಮಳೆಯಿಂದಾಗಿ ಎಲ್ಲ ರೈತರ ಜಮೀನುಗಳಿಗೆ ವಿಮಾ ಕಂಪನಿಯವರು ತೆರಳಿ ಪರೀಶೀಲಿಸಲು ಸಾಧ್ಯವಾಗದ ಕಾರಣ ಜಿಲ್ಲಾಡಳಿತದ ಆದೇಶದ ಪ್ರಕಾರ ಜಂಟಿ ಸರ್ವೆ ಕೈಗೊಂಡು ಜಿಲ್ಲೆಯ ಎಲ್ಲ ರೈತರ ಪ್ರತಿ ಬೆಳೆಗಳಿಗೆ ವಿಮಾ ಕಂಪನಿಯು ಸರ್ಕಾರ ಗೊತ್ತುಪಡಿಸಿದ 100ಅ ಪ್ರತಿಶತ ಹಾನಿ ಪರಿಹಾರದ 25ಅ ಮೊತ್ತವನ್ನು ಭರಿಸಲು ವಿಮಾ ಕಂಪನಿಗೆ ಆದೇಶಿಸಿದ್ದು ಇರುತ್ತದೆ. ಈ ಪೈಕಿ ವಿಮಾ ಕಂಪನಿಯು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮಧ್ಯಂತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಭರಿಸಿರುತ್ತದೆ.
ತೊಗರಿ ಬೆಳೆಗೆ 100ಅ ಪ್ರತಿಶತ ನಷ್ಟವಾದರೆ ಸರಕಾರದ ಮಾನದಂಡ ಪ್ರಕಾರ ಪ್ರತಿ ಎಕರೆಗೆ 20000 ರಿಂದ 21000 ಸಾವಿರ ವರೆಗೆ ಪರಿಹಾರ ಒದಗಿಸಬೇಕು. ಮಧ್ಯಂತರ ಪರಿಹಾರ ಜಿಲ್ಲಾಡಳಿತದ ಘೋಷಣೆ ಪ್ರಕಾರ 25ಅ ಪ್ರತಿಶತ ಮೊತ್ತ ಅಂದರೆ 4800 ದಿಂದ 5000 ರೂ. ವರೆಗೆ ಭರಿಸಬೇಕು. ವಿಮಾ ಕಂಪನಿ ಈಗ ಬಿಡುಗಡೆಗೊಳಿಸಿದ್ದು, ಪ್ರತಿ ಎಕರೆಗೆ 1000 ರೂ ಗಳಿಂದ 2800 ರೂ. ಗಳಿಗೆ ಮಾತ್ರ ವಿಮಾ ಕಂಪನಿಯು ವಯಕ್ತಿಕ ಸಮೀಕ್ಷೆಯನ್ನು ಪರಿಗಣಿಸದೇ ಜಿಲ್ಲಾಡಳಿತದ ಆದೇಶದ ಪ್ರಕಾರ ಜಂಟಿ ಸರ್ವೆ ಕೈಗೊಂಡಿದ್ದು, ಘೋಷಣೆಯ ಪ್ರಕಾರ ಎಲ್ಲ ರೈತರಿಗೂ 25ಅ ಪ್ರತಿಶತ ನಷ್ಟದ ಪರಿಹಾರವನ್ನು ಬಿಡುಗಡೆ ಗೊಳಿಸಬೇಕು.
ಅಂದರೆ ಪ್ರತಿ ರೈತನಪ್ರತಿ ಎಕರೆಗೆ ಕನಿಷ್ಠ 5000 ರೂ. ಗಳನ್ನು ಮಧ್ಯಂತರ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕು. ವಿಮಾ ಕಂಪನಿಯ ಈ ಅವೈಜ್ಞಾನಿಕ ನಿರ್ಧಾರ ಹಾಗೂ ಈ ಪ್ರಕ್ರಿಯೆಯನ್ನು ಗಮನಿಸಬೇಕಾದ ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ರೈತರನ್ನು ಇನ್ನಷ್ಟು ಕುಗ್ಗುವಂತೆ ಮಾಡಿದೆ. ಕಾರಣ ತಾವುಗಳು ಈ ಪ್ರಕ್ರಿಯೆಯನ್ನು ಪುನರ್ ಪರೀಶೀಲಿಸಿ ಜಿಲ್ಲೆಯ ಎಲ್ಲ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬೆಳೆವಿಮೆ ಮಧ್ಯಂತರ ಪರಿಹಾರವನ್ನು ವಿಮಾ ಕಂಪನಿಯವರಿಂದ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 