ಅಧಿಕಮಾಸದ ಪ್ರಯುಕ್ತ ಶಿಗ್ಲಿ ಭಕ್ತರಿಗೆ ಶ್ರೀ ಸ್ವಾಮಿಗಳ ಪವಿತ್ರ ಭೇಟಿಯು ಸನ್ಮಾನ

ಅಧಿಕಮಾಸದ ಪ್ರಯುಕ್ತ ಶಿಗ್ಲಿ ಭಕ್ತರಿಗೆ ಶ್ರೀ ಸ್ವಾಮಿಗಳ ಪವಿತ್ರ ಭೇಟಿಯು ಸನ್ಮಾನ The holy visit of Sri Swamiji is a blessing for Shigli devotees on the occasion of Adhikamasa

ಲೋಕದರ್ಶನ ವರದಿ 

 ಲಕ್ಷ್ಮೇಶ್ವರ  02: ಸಮೀಪದ ಶಿಗ್ಲಿ ಗ್ರಾಮದಲ್ಲಿ ಅಧಿಕಮಾಸದ ಪ್ರಯುಕ್ತ ಗ್ರಾಮದ ಪರಮ ಭಕ್ತರಾದ ವೀರಣ್ಣಾ ಹಾಲಪ್ಪ ಪವಾಡದ ಅವರ ಮನೆಗೆ ಶ್ರೀ ಶ್ರೀ ಶ್ರೀ ಶಿವಪ್ರಕಾಶ ಸ್ವಾಮಿಗಳು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾ ಮೂರ್ತಿಗಳು ಹಿರೇಮಠ ಶ್ರೀ ಕ್ಷೇತ್ರ ಕೊಟ್ಟೂರು. ಅವರು ಭೇಟಿ ನೀಡಿದರು ಹಾಗೂ ಜಗತ್ತಿನ ಯಾವ ಚಿಂತಕರೂ ಆದರ್ಶ ಗುಣಗಳನ್ನು ಅಲ್ಲಗಳೆದಿಲ್ಲ. ಚಿನ್ನ ಬೆಳ್ಳಿ-ಉಡುಗೆ ತೊಡುಗೆ ಮನಕ್ಕೆ ಮುದವನ್ನು ಕೊಡುವ ಬಹಿರಂಗದ ಅಲಂಕಾರಗಳು, ದಾನ ದಯೆ ಕರುಣೆ ವಾತ್ಸಲ್ಯ ಮೊದಲಾದ ಗುಣಗಳು ನಮಗೆ ಆನಂದವನ್ನು ನೀಡುವ ಅಂತರಂಗದ ಅಲಂಕಾರಗಳು. ದೈವೀ ಗುಣಗಳು ನಮ್ಮ ಬದುಕಿಗೆ ಅಲೌಕಿಕ ಬೆಲೆಯನ್ನು ತರುತ್ತವೆ. ಅವುಗಳಿಲ್ಲದಿದ್ದರೆ ನಮ್ಮ ಧನಕನಕ, ಸ್ಥಾನಮಾನ, ವಿದ್ಯಾಬುದ್ಧಿ ಎಲ್ಲವೂ ನಿಷ್ಟಯೋಜಕ. ಭವ್ಯವಾದ ಮನೆ ಮಹಡಿಗಳನ್ನು ಕಟ್ಟಿದರೆ ನಮ್ಮ ಬದುಕು ಪೂರ್ಣ ವಾಗುವುದಿಲ್ಲ.

ಆ ಮನೆಯನ್ನು ನಮ್ಮ ಮನಸನ್ನು ಹಸನಾಗಿಟ್ಟುಕೊಂಡು ಸದ್ಭಾವ ಕುಸುಮಗಳಿಂದ ಅಲಂಕರಿಸಿ ಸುಜ್ಞಾನದ ದೀಪವನ್ನು ಬೆಳಗಿಸಬೇಕು. ಮನುಷ್ಯನ ಕೈ-ಮನ, ಮನ-ಮತಿಗಳೆಲ್ಲ ದುಡಿಯಬೇಕು ಮನುಷ್ಯ ಮಾನವತ್ವದಿಂದ ದೈವತ್ವಕ್ಕೆ ಏರುವುದು ಈ ದುಡಿಮೆಯಿಂದಲೇ ಎಂದು ಸ್ವಾಮಿ ವಿವೇಕಾನಂದರು ಎಚ್ಚರಿಸಿದ್ದಾರೆ. ಕಷ್ಟದ ಬೆಟ್ಟವನ್ನು ಏರಿ ಇಳಿದಾಗಲೇ ನಾವು ಸುಖದ ಸಾಗರವನ್ನು ತಲುಪುತ್ತೇವೆ ಎಂದು   ಶಿವಪ್ರಕಾಶ ಸ್ವಾಮಿಗಳು   ಗುರು ಕೊಟ್ಟೂರೇಶ್ವರ ಸ್ವಾಮಿಯರು ಹೇಳಿದರು . ಹಾಗೂ   ನಿರ್ಮಲಾದೇವಿ ವೀರಣ್ಣಾ ಪವಾಡದ .   ಲಾವಣ್ಯ ಅನ್ನದಾನೇಶ್ವರ ಪವಾಡದ.  ಲಕ್ಷ್ಮೀ ವೀರಸೋಮೇಶ್ವರ ಪವಾಡದ. ಶಿವಯೋಗರಾಜ.ವಿಜಯವೀಣಾ.ನಮ್ರತಾ.ನಂದಿಶ್ವರ.ರಮೇಶ್ ಬಸವಂತಪ್ಪ ಅಣ್ಣಿಗೇರಿ. ಜಗದೀಶ್ ಹಿರೇಮಠ. ರಾಮು ಗೋಕರ್ ಮತ್ತು ಇತರರು ಇದ್ದರು