ಸಚಿವ ಶಿವಾನಂದ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು : ಶಕುಂತಲಾ ಕಿರುಸೂರು
Minister Shivanand Patil should be given the post of Deputy Chief Minister: Shakuntala Kirusuru
ಕೋಲಾರ 02 : ರಾಜ್ಯದ ಮುತ್ಸದ್ದಿ ರಾಜಕಾರಣಿ ಹಾಗೂ ಜನಪ್ರಿಯ ಜನನಾಯಕರಾದ ಸಚಿವ ಶಿವಾನಂದ ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು. ಬಸವನಬಾಗೇವಾಡಿ ತಾಲೂಕಿನ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಹಾಗೂ ರಾಜ್ಯ ಸರ್ವಧರ್ಮ ಮಹಿಳಾ ಸಂಘದ ಅಧ್ಯಕ್ಷರಾದ ಶಕುಂತಲಾ ಕಿರುಸೂರು ಹಾಗೂ ಬ್ಲಾಕ್ ಮಹಿಳಾ ಉಪಾಧ್ಯಕ್ಷರಾದ ಕಮಲಾ ಮಾಕಾಳಿ ಒತ್ತಾಯಿಸಿದ್ದಾರೆ. ಅವಳಿ ಜಿಲ್ಲೆಯ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಾದ ಸಚಿವ ಶಿವಾನಂದ ಪಾಟೀಲರು 6 ಬಾರಿ ಶಾಸಕರಾಗಿ. 2 ಬಾರಿ ಸಚಿವರಾಗಿ ಜನಪ್ರಿಯ ಆಡಳಿತ ನಡೆಸಿದ್ದಾರೆ. ರೈತರ ಪರವಾಗಿ ಕಬ್ಬು ಬೆಳೆಗಾರರ ಪರವಾಗಿ ಬಡವ ದೀನದಲಿತ ಹಿಂದುಳಿದವರ ಪರವಾಗಿ ಸದಾ ಮಿಡಿಯುವ ರಾಜಕಾರಣಿ ಕ್ಷೇತ್ರದ ರಸ್ತೆ ಸುಧಾರಣೆ ಹಾಗೂ ನೀರು ಸರಬರಾಜು ನಲ್ಲಿ ಸಚಿವರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸಚಿವ ಶಿವಾನಂದ್ ಪಾಟೀಲರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದು ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ಗಮನಹರಿಸಿ ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಶಿವಾನಂದ ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಸಮಗ್ರ ವಿಜಯಪುರ ಜಿಲ್ಲೆಯಿಂದ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಹಾಲುಮತ ಸಮಾಜದಿಂದ ಶಕುಂತಲಾ ಕಿರಸೂರ ಒತ್ತಾಯಿಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 