ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ್ಯಕ್ರಮ
Dr. Mallikarjun Patil Charity Program in Dharwad
ಲೋಕದರ್ಶನ ವರದಿ
ಧಾರವಾಡ 02 : ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ್ಯಕ್ರಮ ಅಂಗವಾಗಿ ದಿನಾಂಕ: 3-6-2026 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ‘ಅನುವಾದ ಕಲೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ. ಧಾರವಾಡ ಎಮರಿಟಸ್ ಪ್ರಾಧ್ಯಾಪಕರಾದ ಪ್ರೊ. ಸಿ. ಆರ್. ಯರವಿನ ತೆಲಿಮಠ ಉಪನ್ಯಾಸಕರಾಗಿ ಆಗಮಿಸುವರು. ಧಾರವಾಡ ಕೆ.ಇ.ಬೋರ್ಡ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಮೋಹನ ಸಿದ್ಧಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಧಾರವಾಡ ಕ.ವಿ.ವಿ ಹಿಂದಿನ ಕುಲಸಚಿವರು ಹಾಗೂ ಇಂಗ್ಲೀಷ ಪ್ರಾಧ್ಯಾಪಕರು ಪ್ರೊ.ಮಲ್ಲಿಕಾರ್ಜುನ ಪಾಟೀಲ ಹಾಗೂ ಖ್ಯಾತ ಹಿಂದುಸ್ತಾನಿ ಗಾಯಕರಾದ ಡಾ.ನಂದಾ ಪಾಟೀಲ ಗೌರವ ಉಪಸ್ಥಿತರಿರುವರು. ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಧಾರವಾಡದಡಾ. ಮಲ್ಲಿಕಾರ್ಜುನ ಪಾಟೀಲರು ಕ.ವಿ.ವಿ.ಯಲ್ಲಿ ಎಂಎ.ಪಿಎಚ್.ಡಿ ಪದವಿ ಪಡೆದಿರುವರು.ಆಕ್ಸಫರ್ಡ್ ವಿ.ವಿ.ಯಲ್ಲಿತರಬೇತಿ ಪಡೆದಿರುವರು. 1995-2003 ರ ವರೆಗೆ ಗುಲಬರ್ಗಾ ವಿ.ವಿ.ಯಲ್ಲಿಇಂಗ್ಲೀಷ ಭಾಷೆಯಅಧ್ಯಾಪಕರಾಗಿದ್ದರು. ನಂತರ ವಿಜಯಪುರದ ಮಹಿಳಾ ವಿ.ವಿ.ಯಲ್ಲಿಇಂಗ್ಲೀಷ ವಿಭಾಗದ ಸಂಸ್ಥಾಪಕ ಪ್ರಾಧ್ಯಾಪಕರಾದರು.ಅವರು 2004 ರಿಂದ ಕ.ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ, ಮೂರು ಬಾರಿಇಂಗ್ಲೀಷ ವಿಭಾಗದ ಮುಖ್ಯಸ್ಥರಾಗಿ 2017-18ರ ಅವಧಿಯಲ್ಲಿ ಕ.ವಿ.ವಿ.ಯ ಕುಲಸಚಿವರಾಗಿ, ನಂತರಡೀನರು ಮತ್ತು ಸಿಂಡಿಕೇಟ್ ಸದಸ್ಯರಾಗಿಕಾರ್ಯ ನಿರ್ವಹಿಸಿದ್ದಾರೆ. ಇವರು ಡಾ. ನಂದಾ ಪಾಟೀಲ ಸಂಗೀತ ಅಕಾಡೆಮಿಯಲ್ಲಿ 2023ರಲ್ಲಿ ಲಿಂಗಾಯತಗ್ರಂಥ ಭಂಡಾರ ಸ್ಥಾಪಿಸಿದ್ದಾರೆ.
ಇವರು ಈವರೆಗೆ 80 ಪುಸ್ತಕಗಳನ್ನು ಪ್ರಕಟಿಸಿರುವರು. ಇವರ ‘ರೈತಕಲ್ಲಪ್ಪ’ ಕಾದಂಬರಿ ‘ನೇಗಿಲಯೋಗಿ’ ಎಂಬ ಚಲನಚಿತ್ರವಾಗಿದೆ. ಇವರ ಅನೇಕ ಕಾದಂಬರಿಗಳು ಮತ್ತು ಪ್ರವಾಸ ಕಥನಗಳು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿವೆ. ಇವರ ‘ಅಪೂರ್ವ ಅಮೇರಿಕಾ’ ಜನಪ್ರಿಯವಾದ ಪ್ರವಾಸ ಕಥನವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ.ನಂದಾ ಪಾಟೀಲರುತಮ್ಮ ಪತಿಯ ಹೆಸರಿನಲ್ಲಿ 2014 ರಲ್ಲಿ ಈ ದತ್ತಿ ಇರಿಸಿ ಅವರ ಹೆಸರಿನಲ್ಲಿ ಉಪನ್ಯಾಸಗಳು ಜರುಗುವಂತೆ ಮಾಡಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 