ಮಳೆಯಿಂದ ನೆಲಕಚ್ಚಿದ ಭತ್ತ: ಪರಿಹಾರಕ್ಕಾಗಿ ರೈತರ ಅಳಲು
ಮಳೆಯಿಂದ ನೆಲಕಚ್ಚಿದ ಭತ್ತ: ಪರಿಹಾರಕ್ಕಾಗಿ ರೈತರ ಅಳಲು
ಹೂವಿನಹಡಗಲಿ 24- ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದು ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ತುಂಗಭದ್ರಾ ನದಿ ತೀರದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಭತ್ತ ಬೆಳೆ ಮತ್ತು ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ನೆಲಕಚ್ಚಿದೆ.ಮಳೆಯಿಂದ ಕೈಗೆ ಬಂದ ಬೆಳೆ ಸಿಗದೆ ನಷ್ಟವಾಗುತ್ತದೆ,ಆದರೆ ರೈತ ರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ ರೈತ ರ ಅಳಲು. ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ಸುಮಾರು ನೂರು ಎಕರೆ ಪ್ರದೇಶದಲ್ಲಿ ಕಟಾವು ಹಂತದಲ್ಲಿ ದ್ದ ಭತ್ತ ಬೆಳೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಬೆಳೆ ನೆಲಕಚ್ಚಿದೆ.ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಹಾರ ನೀಡಬೇಕೆಂದು ಹಿರೇಬನ್ನಿಮಟ್ಟಿ ಗ್ರಾಮದ ರೈತ ರಾದ ಬಸವರಾಜ ಹಣ್ಣಿಗೇರಿ, ವೀರೇಶ .ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ್ ಹೊಳಗುಂದಿ ಮನವಿ ಮಾಡಿದ್ದಾರೆ.