ರೋಣ

ರೇವಣಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೀರ್ತನ ಮುಕ್ತಾಯ

ರೇವಣಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೀರ್ತನ ಮುಕ್ತಾಯ

ರೋಣ 01:  ತಾಲೂಕಿನ ಹುಗುಂಡಿ ಗ್ರಾಮದಲ್ಲಿ  ರೇವಣಶಿದ್ದೇಶ್ವರ ಭಾವಚಿತ್ರ ಮೆರವಣಿಗೆಯನ್ನು ಹಾಗೂ ಕುಂಭ ಮೇಳ ಹಾಗೂ ಡೊಳ್ಳಿನ ಮೇಳ ಮೇರವಣಿಗೆಯನ್ನು  ಬಸವಂತಪ್ಪ ಹೆಚ್ ತಳವಾರ ಜಿಲ್ಲಾ ಮಟ್ಟದ ಜಾಗೃತಾ ಸಮಿತಿಯ ಮಾಜಿ ಸದಸ್ಯರು, ಇವರು ಉದ್ಘಾಟಿಸಿ  ಪ್ರಸ್ತಾವಿಕವಾಗಿ  ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಪ್ರವಚನ ಕೀರ್ತನ ಪುರಾಣ ಮಾಯವಾಗಿವೆ ಪುನಃಶ್ಚೇತನ ಮಾಡಲಿಕ್ಕೆ ಗ್ರಾಮದ ಹಿರಿಯರು ಯುವಕರು ಸೇರಿಕೊಂಡು ಹುನಗುಂಡಿ ಗ್ರಾಮದಲ್ಲಿ ಸುಮಾರು 11 ವರ್ಷ ರೇವಣಸಿದ್ದೇಶ್ವ ರ ಪ್ರವಚನ ಕೀರ್ತನ ಪ್ರಾರಂಬ ಮಾಡಿದ್ದಾರೆ ಒಳ್ಳೆಯ ಭಕ್ತಿಯ ತತ್ವಗಳು ತಿಳಿದುಕೊಂಡು ಸಮಾಜದಲ್ಲಿ ಬಾಳಬೇಕೆಂದು ಯುವಕರಿಗೆ ಕರೆ ನೀಡಿದರು.        ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಸಂಗೀತ ಕಾರ್ಯಕ್ರಮ ನಾಟಕ ಹಾಗೂ ರಸ ಮಂಜರಿ ಕಾರ್ಯಕ್ರಮಗಳಿಗೆ ಜನರು ಬಹಳ ಮಹತ್ವ ಕೊಡುತ್ತಾರೆ. ಇಂತಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಅದರ ಜೊತೆಗೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳು ಪುರಾಣ ಪ್ರವಚನ, ಕೀರ್ತನ, ದಂತಹ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿಗೆ ಒತ್ತು ಕೊಡಬೇಕೆಂದರು.ಸಮಾಜದಲ್ಲಿ ಉತ್ತಮರಾಗಿ ಬಾಳಬೇಕೆಂದು ಯುವಕ ಯುವತಿಯರಿಗೆ ತಿಳಿಸಿದರು.       

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ನಿಜಗುಣ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಹುನಗುಂಡಿ ಗ್ರಾಮದಲ್ಲಿ ರೇವಣಶಿದ್ದೇಶ್ವರ ಪ್ರವಚನ ಕೀರ್ತನ ಬಹಳ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದಿರಿ ಆ ದೇವರು ಎಲ್ಲರಿಗೂ ತಮ್ಮ ಇಷ್ಟಾರ್ಥ ಈಡೇರಿಸಲಿ ಎಂದು ಆಶೀರ್ವಾದ ಮಾಡಲೆಂದು ಬೇಡಿಕೊಳ್ಳುತ್ತೇವೆಂದರು. ಈ ವರ್ಷ ಬಹಳ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಕಾರ್ಯಕ್ರಮ ಯಶಶ್ವಿಗೊಳಿಸಿದ್ದೀರಿ ಗ್ರಾಮದ ಎಲ್ಲ ಹಿರಿಯರಿಗೆ ಮಹಿಳೆಯರಿಗೆ ಯುವಕರಿಗೆ ಆ ದೇವರು ಸಕಲ ಸಂಪತ್ತನ್ನು ಗ್ರಾಮದ ಎಲ್ಲ ಭಕ್ತಾದಿಗಳಿಗೆ ನೀಡಲೆಂದು  ಆಶೀರ್ವಚನ ನೀಡಿದರು.        ಕೃಪಾನಂದ ಮಹಾಸ್ವಾಮಿಗಳು ಹುನಗುಂಡಿ ಗ್ರಾಮದಲ್ಲಿ ಸತತವಾಗಿ 11 ವರ್ಷ ರೇವನಶಿದ್ದೇಶ್ವರ ಪುರಾಣ ಪ್ರವಚ ಕೀರ್ತನ, ಮಾಡಿಕೊಂಡು ಬಂದಿದ್ದಿರಿ. ಆ ದೇವರು ನಿಮಗೆಲ್ಲರಿಗೂ ಒಳ್ಳೆಯದು ಮಾಡಲೆಂದು ಆಶೀರ್ವಚನ ನೀಡಿದರು.ಕೃಪಾನಂದ ಮಹಾಸ್ವಾಮಿಗಳು .ಹುನಗುಂಡಿ ಗ್ರಾಮದ ಹಿರಿಯರು,ಯುವಕರು ಕೂಡಿಕೊಂಡು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಿರಿ ಗ್ರಾಮದ ಎಲ್ಲ ಸದ್ಬಕ್ತರಿಗೆ ಆ ದೇವರು ಸಕಲ ಸಂಪತ್ತನ್ನು ನೀಡಿಲೆಂದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕೀರ್ತನವನ್ನ ಶಾಸ್ತ್ರೀಗಳಾದ ಸಕ್ರಗೌಡ ಹೆಚ್ ಹಳೆಮನಿ ಹೇಳಿದರು.ವಿನೋದ ಪಿ ಸಾಲಿಮಠ, ತಬಲಾಜಿ ನಡೆಸಿದರು.  

ಈ ವೇಳೆ ಉಪಸ್ಥಿತಿಯನ್ನ ಬಿ ವಾಯ್ ಮಂಡಸೊಪ್ಪಿ, ಶಿವಾಜಿ ಮಂಡಸೊಪ್ಪಿ, ಆರಿ​‍್ಬ,ಗೂಳಪ್ಪನವರ, ಕೆ ಬಿ ವಿರಸಣ್ಣವರ, ಬಿ ಎಮ್ ಗೂಳಪ್ಪನವರ,ಎಮ್ ಎಚ್ ಜಂತ್ಲಿ, ಶರಣಪ್ಪ ಕುರಿ, ಎಚ್ ವಿ ಮುದೇನಗುಡಿ, ಸಂತೋಷ ತಳವಾರ, ಬಸವಂತಪ್ಪ ಮಂಡಸೊಪ್ಪಿ, ಯಲ್ಲಪ್ಪ ತಳವಾರ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೊನೆಯಲ್ಲಿ ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಸಿದರು. 


ಸುದ್ದಿ ಓದಿ