ಸೇವಾ ನಿವೃತ್ತಿ: ಸರದೇಶಪಾಂಡೆ ಬೀಳ್ಕೊಡುಗೆ

ಸೇವಾ ನಿವೃತ್ತಿ: ಸರದೇಶಪಾಂಡೆ ಬೀಳ್ಕೊಡುಗೆ  Retirement: Farewell to Sardesha Pandey

ಬೆಳಗಾವಿ 01 : ಖಾನಾಪುರ ತಾಲೂಕಿನ ಭಾರತೀಯ  ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಎಂದು ಸೇವೆ ಸಲ್ಲಿಸುತ್ತಿದ್ದ ಸುಧೀಂದ್ರ ಸರದೇಶಪಾಂಡೆ ಇವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದ ನಿಮಿತ್ತ ಅವರ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು 1989 ರಲ್ಲಿ ಶಾಖೆ 1 ರಲ್ಲಿ ಅಭಿವೃದ್ಧಿ ಅಧಿಕಾರಿ ಎಂದು ಬೆಳಗಾವಿಯಿಂದ ಸೇವೆ ಆರಂಭಿಸಿ  ಸುಧಿರ್ಘ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು.  ಈ ನಿಮಿತ್ತ ಬೀಳ್ಕೊಡುಗೆ ಸಮಾರಂಭ ಖಾನಾಪುರ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಕಿರಣ ಕಾಮತ್, ಪೂಜಾರಿ, ಸುಧೀರ್ ಪಾಟೀಲ್, ಸಿಬ್ಬಂದಿ ವರ್ಗ ಹಾಗೂ ಅಪಾರ ಪ್ರತಿನಿಧಿಗಳು ಸೇರಿದ್ದರು.