ನಿವೃತ್ತ ಮೀಸಲು ಪಡೆ ಪೋಲಿಸನ ಮನೆ ಕಳ್ಳತನ: ನಗ ನಾಣ್ಯ ಲೂಟಿ
ಹುಕ್ಕೇರಿ 04: ನಗರದಲ್ಲಿ ಶನಿವಾರ ರಾತ್ರಿ ರಾಷ್ಟ್ರೀಯ ಮೀಸಲು ಪಡೆ ಪೋಲಿಸ್ನ ಮನೆ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ನಡೆದಿದೆ. ಪಟ್ಟಣದ ಬೆಳಗಾವಿ ಬೈಪಾಸ್ ರಸ್ತೆಯಲ್ಲಿ ನಿವೃತ್ತ ಮೀಸಲು ಪಡೆ ಪೇದೆ ಅಶೋಕ ಕಲಾಜ ಎಂಬವರ ಮನೆ ಬೀಗ ಮುರಿದು ಹತ್ತು ಸಾವಿರ ರೂಪಾಯಿ ನಗದು ಮತ್ತು ಐವತ್ತು ಗ್ರಾಂ ಬಂಗಾರ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳರು ಶನಿವಾರ ರಾತ್ರಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.ಸ್ಥಳಕ್ಕೆ ಹುಕ್ಕೇರಿ ಇನ್ಸಪೆಕ್ಟರ ರಫೀಕ ತಹಸಿಲ್ದಾರ ಮತ್ತು ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರಿ ಆಗಮಿಸಿ ಪರೀಶೀಲನೆ ಮಾಡಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ಕೈಕೊಂಡಿದ್ದಾರೆ. ಜನನಿಬಿಡ ಸ್ಥಳದಲ್ಲೇ ಮನೆ ಕಳ್ಳತನವಾಗಿದ್ದನ್ನು ಕಂಡು ಜನರು ಭಯಭೀತರಾಗಿದ್ದಾರೆ.