ಸಂಶೋಧನೆಯಿಂದ ಸಮಾಜದ ಮೌಲ್ಯವರ್ಧನೆ ಸಾಧ್ಯ: ಪ್ರೊ.ಸಿ.ಎಂ. ತ್ಯಾಗರಾಜ
Research can add value to society: Prof. C.M. Thyagaraja
ಲೋಕದರ್ಶನ ವರದಿ
ಬೆಳಗಾವಿ 23 : ಸಂಶೋಧನೆಯ ಮುಖ್ಯ ಉದ್ದೇಶ ಜ್ಞಾನ ಸೃಷ್ಠಿಯ ಜೊತೆ ಅದು ಸಮಾಜದ ಒಳಿತಿಗಾಗಿ ಶ್ರಮಿಸುವುದು. ನಾವು ಕೈಗೊಳ್ಳುವ ಸಂಶೋಧನೆಯಲ್ಲಿ ಶಿಸ್ತು, ನೈತಿಕತೆ ಮತ್ತು ಮೌಲ್ಯವರ್ಧಕ ಸಂಗತಿಗಳು ಇರುವುದು ಬಹಳ ಅವಶ್ಯಕ" ಎಂದು ರಾಣಿಚನ್ನಮ್ಮವಿಶ್ವವಿದ್ಯಾಲಯದಕುಲಪತಿಗಳಾದ ಪ್ರೊ.ಸಿ.ಎಂ ತ್ಯಾಗರಾಜ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ, ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗ "ಸಂಶೋಧನೆ ಮತ್ತು ಪ್ರಕಟಣೆಯ ನೀತಿಶಾಸ್ತ್ರ " ಎಂಬ ವಿಷಯದಡಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಸಂಶೋಧನೆಯ ಯಶಸ್ಸು ಅದರ ಗುಣಮಟ್ಟದಲ್ಲಿದೆ. ಆ ಸಂಶೋಧನೆಯು ಮನುಕುಲದ ಏಳಿಗೆಗೆ ಕಾರ್ಯನಿರ್ವಹಿಸುವ ಉದಾತ್ತ ಉದ್ದೇಶವನ್ನು ಹೊಂದಿದ್ದಾಗ ಮಾತ್ರ ಅದು ಅರ್ಥಪೂರ್ಣವೆನಿಸುತ್ತದೆ ಎಂದು ಹೇಳಿದರು. ಪ್ರಾಧ್ಯಾಪಕರುಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶದ ನಿರ್ದೇಶಕರಾದ ಪ್ರೊ. ಆರ್. ಎನ್. ಮನಗೂಳಿ ಮಾತನಾಡಿ "ಸಂಶೋಧನೆಯಲ್ಲಿ ನೈತಿಕತೆಯನ್ನು ಮಾನದಂಡವಾಗಿಸಿಕೊಳ್ಳಿ. ನಿಮ್ಮ ಸಂಶೋಧನಾ ಪಯಣದಲ್ಲಿ ನಿರಂತರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿರಿ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದಶ್ರೀ. ಸಂತೋಷ ಕಾಮಗೌಡ, ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಬಾಬು, ಬೆಂಗಳೂರಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಡಾ. ಬಿ. ಎಸ್. ಶಿವರಾಮ್, ಗ್ರಂಥಾಲಯ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕಿರಣ್ ಸವಣೂರ, ಡಾ. ರಮೇಶ್ ಕುರಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಅಮೃತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 