ಧಾರ್ಮಿಕ ಸಂಸ್ಕಾರ ವ್ಯಕ್ತಿತ್ವವನ್ನು ರೂಪಿಸುತ್ತದೆ : ಪೇಜಾವರ ಶ್ರೀಗಳು
Religious rituals shape personality: Pejawar monks
ಶಿಗ್ಗಾವಿ 30 : ಒಂದು ಉತ್ತಮವಾದ ಭವಿಷ್ಯದ ಭರವಸೆಯನ್ನು ಇಂದಿನ ಆಧುನಿಕ ಶಿಕ್ಷಣ ನೀಡುವುದಿಲ್ಲ. ಲೌಕಿಕ ವಿದ್ಯೆಯೊಂದಿಗೆ ಶಾಸ್ತ್ರಗಳ ಜ್ಞಾನ ಹಾಗೂ ಧಾರ್ಮಿಕ ಸಂಸ್ಕಾರ ವ್ಯಕ್ತಿತ್ವಕ್ಕೆ ಪರಿಪೂರ್ಣತೆ ನೀಡುತ್ತದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥರು ತಿಳಿಸಿದರು. ಪಟ್ಟಣದ ಕುಂಬಾರ ಓಣಿಯಲ್ಲಿರುವ ಶ್ರೀ ವಾದಿರಾಜ ಮಠಕ್ಕೆ ಮಹಿಳೆಯರ ಕುಂಭ ಮೇಳದೊಂದಿಗೆ ಆಗಮಿಸಿ ನಂತರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಧಾರ್ಮಿಕ ಶ್ರದ್ಧಾವಂತ ಜನತೆ ಪೌರೋಹಿತ್ಯದ ಪರಂಪರೆಯನ್ನು ಉಳಿಸಬೇಕು. ನಮ್ಮ ಆಧ್ಯಾತ್ಮಿಕ ಸಾಧನೆಗೆ ನಾವೇ ಮುಂದಾಗಬೇಕು. ಸಮಾಜದಲ್ಲಿ ಧರ್ಮ ಜಾಗೃತಿ ಹಾಗೂ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಶಿಕ್ಷಣದ ಅಗತ್ಯವಿದೆ ಎಂದರು ಈ ಸಂದರ್ಭದಲ್ಲಿ ಮೋಹನರಾವ ದೇಶಪಾಂಡೆ, ಭೋದಣ್ಣಾ ಬೆಳಗಲಿ, ನರಹರಿ ಕಟ್ಟಿ, ರಾಘವೇಂದ್ರ ದೇಶಪಾಂಡೆ, ಕ್ರಿಷ್ಣಾ ಕೋಳಿವಾಡ, ನಾಗರಾಜ ಕೋಳಿವಾಡ, ಡಿ.ಜಿ.ಕುಲಕರ್ಣಿ, ಸಂತೋಷ ಹತ್ತಿಮತ್ತೂರ, ಪ್ರಕಾಶ ಕುಲಕರ್ಣಿ, ಗೋಪಾಲ ಭಾವಿಕಟ್ಟಿ, ಪವನ ಚಿಮ್ಮಲಗಿ ಸೇರಿದಂತೆ ಸಮಾಜ ಭಾಂದವರು ಪಾಲ್ಗೊಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 