ವೇಮನ್ ಕೋ-ಆಪ್ ಸೊಸಾಯಿಟಿಯ ಐಎಫ್ಎಸ್ಸಿ ಕೋಡ್ ಬಿಡುಗಡೆ
ಮೂಡಲಗಿ 31: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸೊಸಾಯಿಟಿಗಳಲ್ಲಿ ಒಂದಾದ ವೇಮನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯವರು ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಸೊಸಾಯಿಟಿಯ ಐಎಫ್ಎಸ್ಸಿ ಕೋಡ್ ಬಿಡುಗಡೆ ಸಮಾರಂಭ ಬುಧವಾರದಂದು ಸೊಸಾಯಿಯಲ್ಲಿ ಜರುಗಿತು.
ಐಎಫ್ಎಸ್ಸಿ ಕೋಡ್ ಬಿಡುಗಡೆಗೋಳಿಸಿದ ಸೊಸಾಯಿಟಿಯ ಅಧ್ಯಕ್ಷ ಸಂತೋಷ ಸೋನವಾಲಕರ ಮಾತನಾಡಿ, ನಮ್ಮ ಸೊಸಾಯಿಟಿಯ ಗ್ರಾಮಹಕರು ಹಾಗೂ ಗ್ರಾಮೀಣ ಭಾಗದಲ್ಲಿನ ಜನರು ವಿವಿಧ ಹಣಕಾಸಿನ ಸಂಸ್ಥೆಗಳೊಂದಿಗ ಹಣಕಾಸಿನ ವ್ಯವಹಾರ ಮಾಡಲು ನಮ್ಮ ವೇಮನ್ ಸೊಸಾಯಿಟಿಯಿಂದ ಐಎಫ್ಎಸ್ಸಿ ಕೋಡ್ ಹೊಂದಿರುವುದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸೊಸಾಯಿಟಿಯ ಉಪಾಧ್ಯಕ್ಷ ಹನಮಂತಗೌಡ ಪ್ಯಾಟಿಗೌಡರ ಮಾತನಾಡಿ, ಸೊಸಾಯಿಟಿಯ ಗ್ರಾಹಕರಿಗೆ ತ್ವರಿತ ಹಣಕಾಸಿ ವ್ಯವಹಾರಕ್ಕಾಗಿ ಐಎಫ್ಎಸ್ಸಿ ಕೋಡ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಐಸಿಐಸಿಐ ಬ್ಯಾಂಕಿನ ಮೂಡಲಗಿ ಶಾಖಾ ವ್ಯವಸ್ಥಾಪಕ ತನವೀರಅಹ್ಮದ ಸನದಿ, ಸಹಾಐಕ ವ್ಯವಸ್ಥಾಪಕ ಪ್ರವೀಣ ಶಿರಹಟ್ಟಿ, ವೇಮನ್ ಸೊಸಾಯಿಟಿ ನಿರ್ದೇಶಕರಾದ ಪಾಂಡಪ್ಪ ಸೋನವಾಲಕರ, ಯಮನಪ್ಪ ಮಂಟನವರ, ಸಚೀನ ಸೋನವಾಲಕರ, ತಮ್ಮಣ್ಣಾ ಝಂಡೇಕುರಬರ, ಪ್ರದಾನ ವ್ಯವಸ್ಥಾಪಕ ಬಿ.ಬಿ.ಕುಟರಟ್ಟಿ, ವೆಂಕಟೇಶ ಸತರಡ್ಡಿ ಸೊಸಾಯಿಟಿಯ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.