ಹುಕ್ಕೇರಿ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಣ: ಹುಕ್ಕೇರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಣ: ಹುಕ್ಕೇರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಹುಕ್ಕೇರಿ 22: ಹುಕ್ಕೇರಿ ತಾಲೂಕಿನೆಲ್ಲಡೆ ರಾಮಲಲ್ಲಾನ ಸಂಭ್ರಮ ಮುಗಿಲು ಮುಟ್ಟಿತು. ಅಯೋಧೆ್ಯಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಣ ಅಂಗವಾಗಿ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ,  ಪಟ್ಟಣಗಳ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಕೇಸರಿ ಬಣ್ಣದ ಪತಾಕೆಗಳು, ಬಂಟಿಗ್ಸಗಳು ರಸ್ತೆಯಲ್ಲಿ ಅಳವಡಿಸಿ ಹಬ್ಬದ ಕಳೆ ತಂದಿವೆ.  

ತಾಲೂಕಿನ ಶಿರಗಾಂವ ಗ್ರಾಮದಲ್ಲಿ ಬೆಳಗಿನ ಜಾವ ಮಹಿಳೆಯರು ಕುಂಭ ಮೇಳದೊಂದಿಗೆ ಬಸವಣ್ಣ ದೇವಾಲಯಕ್ಕೆ ಆಗಮಿಸಿ ವಿಷೇಶ ಪೂಜೆ ನೇರವೆರಿಸಿ ವಾದ್ಯ ಮೇಳಗಳೊಂದಿಗೆ ರಥದಲ್ಲಿ ರಾಮ ಲಕ್ಷ್ಮಣ ಹನುಮನ ಪಾತ್ರಧಾರಿಗಳಿಗೆ ಹಾಗೂ ಬಸವಣ್ಣ ದೇವರ ಪಲ್ಲಕ್ಕಿ,  ಚಕ್ಕಡಿಯಲ್ಲಿ ಹನುಮನ ಭಾವ ಚಿತ್ರ ಮೇರವಣೆಗೆ ಮಾಡಲಾಯಿತು. ಮಾದ್ಯಮಗಳೊಂದಿಗೆ ಮಾತನಾಡಿದ ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕ ರವಿ ಹಿಡಕಲ್ ಇಂದು ಅಯೋದ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಟಾಪನೆ ಯಾಗುತ್ತಿರುವ ಹಿನ್ನಲೆಯಲ್ಲಿ ಶಿರಗಾಂವ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಐದು ದಶಕಗಳ ಕಾಲ ಹೋರಾಟದಲ್ಲಿ ಕರ ಸೇವಕರು ಮಾಡಿದ ತ್ಯಾಗ ಇಂದು ಫಲ ನೀಡಿದೆ ಅಯೋಧ್ಯೆಯಲ್ಲಿ ಮರ್ಯಾದೆ ಪುರುಷೋತ್ತಮನ ಬಾಲ ಮೂರ್ತಿ ಪ್ರತಿಷ್ಠಾಪನೆಗೆ ಇಂದು ಭಾರತ ದೇಶದಲ್ಲಿ ಹಬ್ಬವಾಗಿ ಆಚರಿಸುತ್ತಿದ್ದೆವೆ ಎಂದರು. 

ಈ ಸಂದರ್ಭದಲ್ಲಿ ರಾಜು ಬೀರಾದಾರ ಪಾಟೀಲ, ರಮ3ಶ ಅಲಗುರೆ, ಸುರೇಶ ತೇರಣಿ, ರಾಜು ದವನಕಟ್ಟಿ, ಬಸವರಾಜ ಗಟಿಗೆನ್ನವರ, ಎಸ್ ಆರ್ ಸಂಗೋಳ್ಳಿ, ರಮೇಶ ಖತಗಲ್ಲಿ, ವಿನಯ ಚೌಗಲೆ, ಆನಂದ ಸೋಮನವರ, ಹರಿಶ ದೊಡಲಿಂಗನವರ ಉಪಸ್ಥಿತರಿದ್ದು ಜೈ ಶ್ರೀರಾಮ ಜೈ ಜೈ ಶ್ರೀರಾಮ ಘೋಷನೆ ಮುಗಿಲು ಮುಟ್ಟಿತ್ತು.ಶಿರಗಾಂವ ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿಗಳು, ಮಹಿಳೆಯರು, ಗ್ರಾಮಸ್ಥರು ಮೇರವಣೆಗೆಯಲ್ಲಿ ಪಾಲ್ಗೊಂಡಿದ್ದರು, ನಂತರ ಮಹಾಪ್ರಸಾದ ಜರುಗಿತು.ಹುಕ್ಕೇರಿ ನಗರದ ಪೋದ್ದಾರ ಜ್ಯುವೇಲರ್ಸ ಅಂಗಡಿ ಬಳಿ ಶ್ರೀರಾಮನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸೋಮವಾರದ ಸಂತೆಗೆ ಬಂದ ಜನರಿಗೆ ಸಿಹಿ ಹಂಚಿದರು. ಜಾಬಾಪೂರದ ಹಾಳೂರು ಹನುಮ ಮಂದಿರದಲ್ಲಿ ಮಹಿಳೆಯರು ಹೋಮ ಹವನ ನೇರವೇರಿಸಿದರು. 


ಸುದ್ದಿ ಓದಿ