ಬಾಗಿಲು ಕಾಯುವ, ಗಾಡಿ ಹೊಡೆದು, ಬ್ಯಾಗ್ ಹಿಡಿಯುವವ ಎಮ್ ಎಲ್ ಸಿ ಆಗಿದ್ದಾನೆ : ಆ ಸಣ್ಣ ವ್ಯಕ್ತಿ ವಿರುದ್ದ ಮಾತನಾಡುವದಿಲ್ಲ : ಚನ್ನರಾಜ್ ವಿರುದ್ದ ರಮೇಶ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ : ಬಾಗಿಲ ಕಾಯುವವ, ಬ್ಯಾಗ್ ಹಿಡಿಯುವನ, ಕಾರ ನಡೆಸುವವ ಎಮ್ ಎಲ್ ಸಿ ಆಗಿದ್ದಾನೆ. ಆ ರೀತಿಯ ಕೆಳಮಟ್ಟದ ವ್ಯಕ್ತಿಯ ವಿರುದ್ದ ನಾನು ಮಾತನಾಡುವದಿಲ್ಲ ಎಂದು ಚನ್ನರಾಜ್ ಹಟ್ಟಿಹೋಳಿ ವಿರುದ್ದ ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸ ಗಡ ಕೋಟೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ, ರಮೇಶ ಜಾರಕಿಹೊಳಿ ಅವರು ಗ್ರಾಮೀಣ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ಗೋಕಾಕ ಕ್ಷೇತ್ರದಲ್ಲಿ ಬಂದು ಅವರು ಎದೆ ತಟ್ಟಿ ಹೇಳುವಾಗ ಎಲ್ಲಿ ಹೋಗಿತ್ತು ಇವರ ಶಿಷ್ಟಾಚಾರ, ಇವಾಗ ನಾನು ರಾಜಹಂಸಗಡಕ್ಕೆ ಬಂದಾಗ ಶಿಷ್ಟಾಚಾರ ನೆನಪಾಗುತ್ತದೆ ಎಂದು ದೂರಿದರು.
ಪ್ರತಿಮೆ ನಿರ್ಮಾಣಕ್ಕೆ ಸರಕಾರದಿಂದ ಬಂದ ಅನುದಾನವಾಗಿದೆ. ಅದಕ್ಕೆ ಇದು ಸರಕಾರಿ ಕಾರ್ಯಕ್ರಮ ವಾಗುತ್ತದೆ. ಇಲ್ಲಿ ಶಿಷ್ಟಾಚಾರವಾಗಿ ಎಲ್ಲ ಕಾರ್ಯಕ್ರಮ ನಡೆಯಬೇಕು. ಅದಕ್ಕೆ ಮುಖ್ಯಮಂತ್ರಿಗಳು ಬರಬೇಕು. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಾಗಬಾರದು ಎಂದು ನುಡಿದರು. ಅಲ್ಲದೆ ಬೆಂಕಿ ಜೊತೆ ಸರಸಾ ಆಡತಾ ಇದ್ದಾರೆ. ನಾನು ಪಕ್ಷ ಸಂಘಟನೆ ಗೆ ಬಂದರೆ ಶಿಷ್ಟಾಚಾರ ಆಗುತ್ತಾ. ಯಾವ ಬೆಂಕಿ ಎಲ್ಲಿ ಎಂದು ಪ್ರಶ್ನಿಸಿದರು.
ಅದರಂತೆ ಹಿರೇಬಾಗೇವಾಡಿ ಕೆರೆ ಒತ್ತುವರಿ ಗೋಲ್ ಮಾಲ್ ಆಗಿದೆ ಎನ್ನುತ್ತಿದ್ದ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ರಮೇಶ ಜಾರಕಿಹೊಳಿ ಅವರು, ಹಿರೇಬಾಗೇವಾಡಿ ಕೆರೆ ಒತ್ತುವರಿ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳೊಂದಿಗೆ ಮಾತನಾಡುವೆ. ಇವಾಗ ಗಾಳಿ ಮಾತು ಬೇಡ. ಅವನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಜಾರಕಿಹೊಳಿ ನುಡಿದರು.