ಅಂತರರಾಷ್ಟ್ರೀಯ

ರಂಜಾನ್ ಕೊನೆ: 3 ದಿನ ಬಂದೂಕು ಕೆಳಗಿಟ್ಟ ತಾಲಿಬಾನ್ ಉಗ್ರರು

ರಂಜಾನ್  ಕೊನೆ:   3 ದಿನ ಬಂದೂಕು ಕೆಳಗಿಟ್ಟ ತಾಲಿಬಾನ್ ಉಗ್ರರು

ಕಾಬೂಲ್, ಮೇ 8: ರಂಜಾನ್ ಪವಿತ್ರ ಮಾಸಚಾಣೆಯ ಕೊನೆಯ ಅಂಗವಾಗಿ ತಾಲಿಬಾನ್ ಉಗ್ರರು ಮೂರು ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿವೆ ಎಂದು  ಗುಂಪಿನ ಮೂಲವೊಂದು  ಸ್ಪುಟ್ನಿಕ್ ಗೆ  ತಿಳಿಸಿದೆ. 

ಮೂಲದ ಪ್ರಕಾರ, ಕದನ ವಿರಾಮ ಘೋಷಿಸಲಾಗಿದ್ದು,  ಈದ್ ಅಲ್-ಫಿತರ್ ನಂತರ ಮೂರು ದಿನಗಳ ಕಾಲ ಬಂದೂಕು  ಹಿಡಿದು  ಹೋರಾಡದಂತೆ ತಾಲಿಬಾನ್  ಉಗ್ರರಿಗೆ ತಿಳಿ ಹೇಳಿದೆ.  

ಈದ್ ಅಲ್-ಫಿತರ್ ಅನ್ನು ಮುಂದಿನ ವಾರ ಮುಸ್ಲಿಮರು ಆಚರಿಸಲಿದ್ದಾರೆ. ಕತಾರ್  ರಾಜಧಾನಿ ದೋಹಾದಲ್ಲಿ ಸರ್ಕಾರ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಹಿಂಸಾತ್ಮಕ ಘರ್ಷಣೆಗಳು ಮತ್ತು ಬಾಂಬ್ ಸ್ಫೋಟಗಳು ಅಫ್ಘಾನಿಸ್ತಾನವನ್ನು ಧ್ವಂಸ ಮಾಡುತ್ತಿವೆ. 

ಸುದ್ದಿ ಓದಿ