ಗದಗಿನಲ್ಲಿ ಸಾಂಕ್ರಾಮಿಕ ರೋಗದ ಕಾರ್ಖಾನೆಯಾದ ಜವಳಗಲ್ಲಿ ರಾಜಕಾಲುವೆ. ಕುಡಿಯುವ ನೀರಿನ ಪೈಪ್ ಮೇಲೆಯೇ ಮಾಂಸದ ತ್ಯಾಜ್ಯ; ತುರ್ತು ಕ್ರಮಕ್ಕೆ ಕೃಷ್ಣಾ ಹಡಪದ ಮನವಿ

ಗದಗಿನಲ್ಲಿ ಸಾಂಕ್ರಾಮಿಕ ರೋಗದ ಕಾರ್ಖಾನೆಯಾದ ಜವಳಗಲ್ಲಿ ರಾಜಕಾಲುವೆ. ಕುಡಿಯುವ ನೀರಿನ ಪೈಪ್ ಮೇಲೆಯೇ ಮಾಂಸದ ತ್ಯಾಜ್ಯ; ತುರ್ತು ಕ್ರಮಕ್ಕೆ ಕೃಷ್ಣಾ ಹಡಪದ ಮನವಿ  Rajakaluve in Javalagalli, a factory of infectious diseases in Gadag. Meat waste on the drinking wat

ಗದಗಿನಲ್ಲಿ ಸಾಂಕ್ರಾಮಿಕ ರೋಗದ ಕಾರ್ಖಾನೆಯಾದ ಜವಳಗಲ್ಲಿ ರಾಜಕಾಲುವೆ. ಕುಡಿಯುವ ನೀರಿನ ಪೈಪ್ ಮೇಲೆಯೇ ಮಾಂಸದ ತ್ಯಾಜ್ಯ; ತುರ್ತು ಕ್ರಮಕ್ಕೆ ಕೃಷ್ಣಾ ಹಡಪದ ಮನವಿ  

ಗದಗ 31: ನಗರದ ಗಂಗಾಪುರ ಪೇಟೆ ರಸ್ತೆಯ ಜವಳಗಲ್ಲಿಯಲ್ಲಿರುವ ದೊಡ್ಡ ರಾಜಕಾಲುವೆ ಹಾಗೂ ಅದರ ಪಕ್ಕದ ಸಿಸಿ ರಸ್ತೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಾವಿರಾರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗದಗ-ಬೆಟಗೇರಿ ನಗರಸಭೆ ಹಾಗೂ ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಪರಿಹಾರ ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್‌. ಹಡಪದ ಅವರು ಅತ್ಯಂತ ಭಾವನಾತ್ಮಕವಾಗಿ ಕಳಕಳಿಯ ವಿನಂತಿಸಿ ಮನವಿ ಮಾಡಿಕೊಂಡಿದ್ದಾರೆ.       ಈ ರಾಜಕಾಲುವೆಗೆ ಹೊಂದಿಕೊಂಡಂತೆ ತುಂಗಭದ್ರಾ ನದಿಯಿಂದ ಬರುವ ಮುಖ್ಯ ಕುಡಿಯುವ ನೀರಿನ ದೊಡ್ಡ ಪೈಪ್ಲೈನ್ ಹಾದುಹೋಗಿದೆ. ಈ ಪೈಪ್ ಲೈನ್ ನಗರದ ಪ್ರಮುಖ ಓಣಿಗಳಾದ ಡೋರಗಲ್ಲಿ, ಆದಿಜಾಂಬವನಗರ, ಹೊಂಬಳನಾಕಾ ಜನತಾ ಕಾಲೋನಿ ಮತ್ತು ಅಂಬೇಡ್ಕರ್ ನಗರದ ಸಾವಿರಾರು ಜನರಿಗೆ ದಿನನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಆದರೆ, ಈ ಕಾಲುವೆ ಪಕ್ಕದಲ್ಲೇ ಇರುವ ಕೋಳಿ, ಮೀನು ಹಾಗೂ ಮಟನ್ ಮಾರುಕಟ್ಟೆಯ ಮಾಂಸದ ತ್ಯಾಜ್ಯ, ರಕ್ತ ಮತ್ತು ಗಲೀಜನ್ನು  ಈ ಕುಡಿಯುವ ನೀರಿನ ಪೈಪ್ ಮೇಲೆಯೇ ಹಾಕಲಾಗುತ್ತಿದೆ. ಇದು ಇಡೀ ಪ್ರದೇಶವನ್ನು ರೋಗ ಹರಡುವ ಕೇಂದ್ರವನ್ನಾಗಿ ಪರಿವರ್ತಿಸಿದೆ ಎಂದು ಅವರು ವಿಷಾದಿಸಿದ್ದಾರೆ.      ಈ ಕುರಿತು ಅತ್ಯಂತ ಸಕಾರಾತ್ಮಕವಾಗಿ ಮಾತನಾಡಿದ ಕೃಷ್ಣಾ ಎಚ್ ಹಡಪದ ಅವರು, "ಇಲ್ಲಿ ವ್ಯಾಪಾರ ಮಾಡುವ ಸಣ್ಣ ಪುಟ್ಟ ಅಂಗಡಿಕಾರರೂ ನಮ್ಮ ಒಡಹುಟ್ಟಿದವರೇ, ಅವರೂ ಬಡತನದಲ್ಲಿ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದಾರೆ. ಅವರ ಹೊಟ್ಟೆಯ ಮೇಲೆ ಹೊಡೆಯುವುದು ನಮ್ಮ ಉದ್ದೇಶವಲ್ಲ. ಆದರೆ, ವ್ಯಾಪಾರದ ನಂತರ ಉಳಿಯುವ ಹಸಿ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ನಗರಸಭೆಯು ಅವರಿಗೆ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ. ವ್ಯವಸ್ಥೆಯ ಕೊರತೆಯಿಂದಾಗಿ ಇಂದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ" ಎಂದು ಆಡಳಿತ ಮಂಡಳಿಯ ಗಮನ ಸೆಳೆದಿದ್ದಾರೆ.ಮಾನವೀಯತೆಯ ದೃಷ್ಟಿಯಿಂದ ಆಲೋಚಿಸೋಣ:"ಈ ಮುಖ್ಯ ಪೈಪ್ಲೈನ್ನಲ್ಲಿ ಎಲ್ಲಾದರೂ ಸಣ್ಣ ಸೋರಿಕೆ ಉಂಟಾದರೂ, ಈ ಮಾಂಸದ ಕೊಳೆತ ಗಲೀಜು ನೀರಿಗೆ ಸೇರಿಕೊಳ್ಳುತ್ತದೆ. ಈ ನೀರನ್ನು ಕುಡಿಯುವ ನೂರಾರು ಅಮಾಯಕ ಮಕ್ಕಳು, ವೃದ್ಧರು ಮತ್ತು ಸಾರ್ವಜನಿಕರ ಆರೋಗ್ಯದ ಗತಿ ಏನಾಗಬೇಕು? ಅಧಿಕಾರಿಗಳೂ ನಮ್ಮವರೇ, ಅವರ ಮನೆಯಲ್ಲೂ ಮಕ್ಕಳಿದ್ದಾರೆ. ದಯವಿಟ್ಟು ಎಲ್ಲರೂ ಮಾನವೀಯತೆಯ ದೃಷ್ಟಿಯಿಂದ ಒಮ್ಮೆ ಆಲೋಚನೆ ಮಾಡಿ, ಈ ಜ್ವಲಂತ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕು. ಇದರೊಂದಿಗೆ ಸಿಸಿ ರಸ್ತೆಯ ಕೆಳಭಾಗದ ಮಣ್ಣು ಸಂಪೂರ್ಣ ಕೊಚ್ಚಿಹೋಗಿ ರಸ್ತೆ ಒಳಗಿನಿಂದ ಪೊಳ್ಳಾಗಿದೆ. ಯಾವುದೇ ಕ್ಷಣದಲ್ಲಾದರೂ ದೊಡ್ಡ ವಾಹನ ಸಂಚರಿಸಿದರೆ ರಸ್ತೆ ಕುಸಿದು ಜೀವಹಾನಿಯಾಗುವ ಅಪಾಯವಿದೆ. ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಬುದ್ಧಿವಂತಿಕೆ" ಎಂದು ಕಳಕಳಿಯಿಂದ ವಿನಂತಿಸಿದ್ದಾರೆ.ನಗರಸಭೆ ಮತ್ತು ಜಿಲ್ಲಾಡಳಿತದ ಮುಂದಿಟ್ಟಿರುವ ಸರಳ ಹಾಗೂ ಸುಂದರ ಬೇಡಿಕೆಗಳು: 1) ನಗರಸಭೆಯು ತಕ್ಷಣವೇ ಪ್ರತಿಯೊಂದು ಮಾಂಸದ ಅಂಗಡಿಯವರಿಗೂ ಹಸಿ ಕಸ ಸಂಗ್ರಹಿಸಲು ಪ್ರತ್ಯೇಕ ಮುಚ್ಚಳವಿರುವ ದೊಡ್ಡ ಡಬ್ಬಿಗಳನ್ನು ಒದಗಿಸಬೇಕು. 2) ದಿನಕ್ಕೆ ಕನಿಷ್ಠ ಒಂದು ಅಥವಾ ಎರಡು ಬಾರಿ ಕೇವಲ ಈ ಮಾಂಸದ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಲು ವಿಶೇಷ ಘಂಟೆಗಾಡಿ ವ್ಯವಸ್ಥೆ ಮಾಡಬೇಕು. ಇದರಿಂದ ಅಂಗಡಿಕಾರರಿಗೂ ಕಸ ಹಾಕಲು ಅನುಕೂಲವಾಗುತ್ತದೆ, ಇತ್ತ ನೀರಿನ ಪೈಪ್ ಹಾಗೂ ಸಾರ್ವಜನಿಕ ವಾತಾವರಣವೂ ಸ್ವಚ್ಛವಾಗಿ ಉಳಿಯುತ್ತದೆ.ರಸ್ತೆ ದುರಸ್ತಿ ಕಾಮಗಾರಿ: ಕುಸಿಯುವ ಹಂತದಲ್ಲಿರುವ ರಸ್ತೆಯ ಕೆಳಭಾಗಕ್ಕೆ ತಕ್ಷಣವೇ ಕಲ್ಲು-ಮಣ್ಣು ತುಂಬಿಸಿ ರಸ್ತೆಯನ್ನು ಬಲಪಡಿಸಬೇಕು.         ಸಮಸ್ತ ನಾಗರಿಕ ಬಂದುಗಳ ಹಿತಚಿಂತಕರಾದ ಸಚಿವರ ಸುಪುತ್ರರಾದ ಕೃಷ್ಣಗೌಡ್ರು, ಪಾಟೀಲ ಅವರು ನಮ್ಮ ನಗರಸಭೆಯ ಪೌರಾಯುಕ್ತರು ಮತ್ತು ಪ್ರಮುಖ ಯುವ ಅಧಿಕಾರಿಗಳಾದ ಲಕ್ಷ್ಮಣ ಜೋಗದಂಡಕರ್ ಅವರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಅತ್ಯಂತ ಸಹೃದಯರಾಗಿದ್ದು, ಸಾವಿರಾರು ನಾಗರಿಕರ ಜೀವ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಈ ಜ್ವಲಂತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಯುದ್ಧೋಪಾದಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಪರಿಹಾರ ಒದಗಿಸಿಕೊಡಲಿದ್ದಾರೆ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ಸಾಮಾಜಿಕ ಗದಗಿನ ಕಾರ್ಯಕರ್ತ ಕೃಷ್ಣಾ ಎಚ್‌. ಹಡಪದ ಅವರು ಪ್ರಕಟಣೆಯ ಮೂಲಕ ಆಡಳಿತ ವ್ಯವಸ್ಥೆಯ ಮೇಲೆ ಮತ್ತು ರಾಜಕೀಯ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ಎಚ್‌. ಹಡಪದ 9845650612