ತೈವಾನ್ ನಲ್ಲಿ ರೈಲ್ವೆ ಅಪಘಾತ: 38 ಮಂದಿ ದುರ್ಮರಣ
ತೈವಾನ್, ಏ 2:ತೈವಾನ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 38 ಪ್ರಯಾಣಿಕರು ಮೃತಪಟ್ಟಿದ್ದು. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತೈಪೆಯಿಂದ ಟೈಟುಂಗ್ ಗೆ ಸಂಚರಿಸುತ್ತಿದ್ದ ಎಕ್ಸ್ ಪ್ರೆಸ್ ರೈಲು, ಹೌಲಿಯೆನ್ ನ ಸುರಂಗದಿಂದ ಹೊರ ಬರುತ್ತಿದ್ದಂತೆ ಟ್ರಕ್ ಗೆ ಡಿಕ್ಕಿಯಾಗಿ, ಈ ಭೀಕರ ಅಪಘಾತ ಸಂಭವಿಸಿದೆ. ಇದು ಕಳೆದ 4 ದಶಕಗಳಲ್ಲಿ ನಡೆದ ಭೀಕರ ರೈಲು ಅಪಘಾತವಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
ರೈಲಿನ ಮುಂಭಾಗ ಟ್ರಕ್ ಗೆ ಡಿಕ್ಕಿಯಾದರೆ, ಉಳಿದ ಬೋಗಿಗಳು ಸುರಂಗದ ಗೋಡೆಗಳ ಮಧ್ಯೆ ಸಿಲುಕಿಕೊಂಡಿರುವುದರಿಂದ, ಪರಿಹಾರ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಹಲವಾರು ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ,. ದೀರ್ಘ ರಜೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ