ಮೂಡಲಗಿ

ರಾಚವಿವಿ ಖೋ ಖೋ ತಂಡಕ್ಕೆ ಆಯ್ಕೆ

ರಾಚವಿವಿ ಖೋ ಖೋ ತಂಡಕ್ಕೆ ಆಯ್ಕೆ

ಮೂಡಲಗಿ 07: ಇಲ್ಲಿನ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಪೂರ್ಣಿಮಾ ಬಿದರಿ ಹಾಗೂ ನೀಲವ್ವ ಕಬ್ಬೂರ ಅವರು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಖೋ ಖೋ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಕಾಗವಾಡದ ಶಿವಾನಂದ ಕಾಲೇಜಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಈ ಸಾಧನೆಯನ್ನು ಮಾಡಿದ್ದಾರೆ. ಜೊತೆಗೆ ಅಕ್ಷತಾ ಸಪ್ತಸಾಗರ ಹಾಗೂ ರೂಪಾ ನಂದಗಾಮವಮಠ ಅವರು ಬದಲಿ ಆಟಗಾರ್ತಿಯರಾಗಿ ಸ್ಥಾನ ಪಡೆದುಕೊಂಡಿರುತ್ತಾರೆ. ಇವರೆಲ್ಲರ ಸಾಧನೆಗೆ ಕಾಲೇಜಿನ ಅಭಿವೃದ್ಧಿ ಮಂಡಳಿಯ ಸರ್ವ ಸದಸ್ಯರು, ಪ್ರಾಂಶುಪಾಲ ಶಾನೂರಕುಮಾರ ಗಾಣಿಗೇರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವಿ ಗಡದನ್ನವರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ. 


ಸುದ್ದಿ ಓದಿ