ಕೋವಿಡ್ 19 : ಒಂದೇ ದಿನ 22,850 ಪ್ರಕರಣ ದಾಖಲಿಸಿದ ರಷ್ಯಾ
ಮಾಸ್ಕೋ, ಜ 13 :ರಷ್ಯಾ ದೇಶವು ಕಳೆದ 24 ಗಂಟೆಯಲ್ಲಿ 22,850 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 3,471,053 ಕ್ಕೆ ತಲುಪಿದೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಬುಧವಾರ ತಿಳಿಸಿದೆ. "ಕಳೆದ ದಿನದಲ್ಲಿ, ರಷ್ಯಾದ 85 ಪ್ರದೇಶಗಳಲ್ಲಿ 22,850 ಕೊರೊನಾವೈರಸ್ ಪ್ರಕರಣಗಳು ದೃಢೀಕೃತವಾಗಿದ್ದು, 3,082 ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ, ಜನರು ಯಾವುದೇ ಕ್ಲಿನಿಕಲ್ ಲಕ್ಷಣಗಳನ್ನು ತೋರಿಸಲಿಲ್ಲ" ಎಂದು ಕೇಂದ್ರ ಹೇಳಿದೆ.ಸಂಚಿತ ಪ್ರಕರಣಗಳ ಸಂಖ್ಯೆ ಈಗ 3,471,053 ಕ್ಕೆ ತಲುಪಿದ್ದು, ಹೆಚ್ಚಳದ ದರವು ಶೇಕಡಾ 0.7 ರಷ್ಟಿದೆ. ಸಾವಿನ ಸಂಖ್ಯೆ 63,370 ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 28,658 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿದ್ದು, ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2,854,088 ರಷ್ಟಿದೆ.