ಅಂತರರಾಷ್ಟ್ರೀಯ

ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ ಭೂಕಂಪನ

ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ  ಭೂಕಂಪನ

ಮಾಸ್ಕೋ, ಏಪ್ರಿಲ್ 3 :ದಕ್ಷಿಣ ಸ್ಯಾಂಡ್‌ವಿಚ್ ದ್ವೀಪದಲ್ಲಿ ಭುಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.6 ಎಂದು ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ವರದಿ ಮಾಡಿದೆ. ಕಂಪನದ  ಕೇಂದ್ರ ಬಿಂದು 10 ಕಿಲೋಮೀಟರ್ (6 ಮೈಲಿಗಿಂತ ಹೆಚ್ಚು) ಆಳದಲ್ಲಿತ್ತು ಎನ್ನಲಾಗಿದೆ. . ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ ಯಾವುದೇ ಜನರು ವಾಸಿಸುತ್ತಿಲ್ಲವಾದ್ದರಿಂದ, ಭೂಕಂಪನದಿಂದ ಯಾವುದೇ ಸಾವು- ಸೋವಿನ ವರದಿಯಾಗಿಲ್ಲ .ಮೇಲಾಗಿ  ಯಾವುದೇ ಸುನಾಮಿ ಎಚ್ಚರಿಕೆಯನ್ನು ಘೋಷಿಸಲಾಗಿಲ್ಲ ಎಂದು ವರದಿಯಾಗಿದೆ . 


ಸುದ್ದಿ ಓದಿ