ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಭೂಕಂಪ
ಮಾಸ್ಕೋ, ಫೆಬ್ರವರಿ 18 : ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಬುಧವಾರ ಭುಕಂಪನವಾಗಿದ್ದು ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.1 ಎಂದು ದಾಖಲಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ತಿಳಿಸಿದೆ.ಭೂಕಂಪನ ಕೇಂದ್ರ ಬಿಂದು ಟಾಡಿನ್ ಪಟ್ಟಣದ 439 ಕಿಲೋಮೀಟರ್ (272 ಮೈಲಿ) ದೂರದಲ್ಲಿ, 12.6 ಕಿಲೋಮೀಟರ್ ಆಳದಲ್ಲಿತ್ತು ಎನ್ನಲಾಗಿದೆ.ಸದ್ಯ ಭೂಕಂಪದಿಂದ ಯಾವುದೇ ಜೀವ ಹಾನಿ, ಆಸ್ತಿ ಪಾಸ್ತಿಗೆ ಹಾನಿಯಾಗಿರುವ ಯಾವುದೇ ಮಾಹಿತಿ ಇಲ್ಲ. ಯಾವುದೇ ಸುನಾಮಿ ಎಚ್ಚರಿಕೆಯನ್ನೂ ಘೋಷಣೆ ಮಾಡಿಲ್ಲ ನ್ಯೂ ಕ್ಯಾಲೆಡೋನಿಯಾ ಭೂಕಂಪನ ಸಕ್ರಿಯ ವಲಯದಲ್ಲಿದ್ದು ಇಲ್ಲಿ ಪದೆ- ಪದೇ ಭೂಕಂಪನ ಸಂಭವಿಸುತ್ತಿರುತ್ತದೆ ಎಂದೂ ಹೇಳಲಾಗಿದೆ.