ಜಪಾನ್ ಪೂರ್ವ ಕರಾವಳಿಯಲ್ಲಿ ಭೂಕಂಪ
ಟೋಕಿಯೊ, ಮೇ 29 :ಪೂರ್ವ ಜಪಾನಿನ ಪ್ರಾಂತ್ಯದ ಇಬರಾಕಿಯಲ್ಲಿ ಭೂಕಂಪನ ಸಂಭವಿಸಿದೆ ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ 5.3 ಎಂದು ದಾಖಲಾಗಿರುವುದಾಗಿ ದೇಶದ ಹವಾಮಾನ ಸಂಸ್ಥೆ (ಜೆಎಂಎ) ಶನಿವಾರ ತಿಳಿಸಿದೆ. 10 ಕಿಲೋಮೀಟರ್ , 6.2 ಮೈಲಿ ಆಳದಲ್ಲಿ ಕಂಪನ ದಾಖಲಾಗಿದೆ. ಭೂಕಂಪದಿಂದ ಯಾವುದೇ ಆಸ್ತಿ - ಪಾಸ್ತಿ ಹಾನಿ, ಜೀವ ಹಾನಿಯ ಬಗ್ಗೆ ಯಾವುದೇ ಸದ್ಯ ವರದಿಯಾಗಿಲ್ಲ ಜೊತೆಗೆ ಯಾವುದೇ ಸುನಾಮಿ ಎಚ್ಚರಿಕೆ ಘೋಷಿಸಲಾಗಿಲ್ಲ. ಜಪಾನ್ ಭೂಸಕಂಪನದಿಂದ ಸಕ್ರಿಯವಾಗಿರುವ ವಲಯದಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುತ್ತದೆ ಮತ್ತು ನಿಯಮಿತವಾಗಿ ಪ್ರಬಲ ಭೂಕಂಪಗಳಿಂದ ಬಳಲುತ್ತಿದೆ. 2011 ರಲ್ಲಿ 9.0 ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿಯಿಂದ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಜೊತೆಗೆ ಫುಕುಶಿಮಾ ಪರಮಾಣು ಸ್ಥಾವರ ದುರಂತಕ್ಕೂ ಕಾರಣವಾಗಿತ್ತು.